ಉಡುಪಿ: ಜನ ಸಾಮಾನ್ಯರಿಗೆ ಹತ್ತಿರವಾದ ಭಾರತೀಯ ಅಂಚೆ ಇಲಾಖೆ ಜನಮಾನಸದಲ್ಲಿ ಉಳಿಯುವಂತಹ ಜನ ಜಾಗೃತಿ ಕೆಲಸವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಭಿಪ್ರಾಯಪಟ್ಟರು. ಸ್ವಚ್ಚತಾ ಪಾಕ್ಷಿಕದ ಅಂಗವಾಗಿ ಭಾರತೀಯ ಅಂಚೆ ಇಲಾಖೆ, ಉಡುಪಿ ಅಂಚೆ ವಿಭಾಗ ಹಮ್ಮಿಕೊಂಡ ಸ್ವಚ್ಛ ಭಾರತ- ಸ್ವಚ್ಛತಾ ನಡಿಗೆ ಕಾರ್ಯಕ್ರಮವನ್ನು ಶಾಂತಿಯ ದೂತ ,ಸಂದೇಶ ರವಾನೆಯ ಸಂಕೇತ ಪಾರಿವಾಳಗಳನ್ನು ಹಾರಿಸಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಂವಹನ ಕ್ಷೇತ್ರದಲ್ಲಿ ಅಂದಿಗೂ ಇಂದಿಗೂ ಮನೆ ಮಾತಾಗಿರುವ ಭಾರತೀಯ ಅಂಚೆ ಇಲಾಖೆ ಹಾಗು ಅಂಚೆ ಅಣ್ಣನ ಘನತೆ ಇಂದಿಗೂ ಪ್ರಸ್ತುತ. ಹಾಗಾಗಿ ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಾ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಅಂಚೆ ಇಲಾಖೆ ಸ್ತುತ್ಯರ್ಹ ಎಂದು ಶುಭ ಹಾರೈಸಿದರು.
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಸ್ವಾಗತಿಸಿದರು. ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ ವಂದಿಸಿದರು. ಪೂರ್ಣಿಮಾ ಜನಾರ್ದನ್ ಹಾಗು ಸವಿತಾ ಶೆಟ್ಟಿಗಾರ್ ನಿರೂಪಿಸಿದರು. ಉಡುಪಿ ಪ್ರಧಾನ ಅಂಚೆ ಕಚೇರಿಯಿಂದ ಕವಿಮುದ್ದಣ್ಣ ಮಾರ್ಗವಾಗಿ ಸ್ವಚ್ಚತಾ ಜಾಥಾ ಮುಂದುವರೆದು ಮತ್ತೆ ಉಡುಪಿ ಪ್ರಧಾನ ಅಂಚೆ ಕಚೇರಿಯಲ್ಲಿ ಸಮಾಪನಗೊಂಡಿತು. ಉಡುಪಿ ಪ್ರಧಾನ ಅಂಚೆ ಕಚೇರಿ,ಮಣಿಪಾಲ ಅಂಚೆ ಕಚೇರಿ ,ಕುಂದಾಪುರ ಅಂಚೆ ಕಚೇರಿ ,ರೇಲ್ವೇ ಮೇಲ್ ಸರ್ವಿಸ್ , ವಿಭಾಗೀಯ ಅಂಚೆ ಕಚೇರಿ ಮತ್ತು ಉಡುಪಿ ಅಂಚೆ ವಿಭಾಗದ ಇತರ ಅಂಚೆ ಕಚೇರಿಯ ಸಿಬ್ಬಂದಿಗಳು ಈ ಜಾಥಾದಲ್ಲಿ ಭಾಗವಹಿಸಿದ್ದರು.
Kshetra Samachara
17/11/2021 05:26 pm