ಉಡುಪಿ: ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ 'ರಂಗಭೂಮಿ ಉಡುಪಿ'ಯ 2022-23ನೇ ಸಾಲಿನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಉಡುಪಿಯ ಹೋಟೆಲ್ ಡಯಾನಾದಲ್ಲಿ ನಡೆದ ಸಂಸ್ಥೆಯ 57ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿ ಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಡಾ. ಎಚ್.ಎಸ್. ಬಲ್ಲಾಳ್, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು, ಎನ್.ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ಜತೆ ಕಾರ್ಯದರ್ಶಿಗಳಾಗಿ ಶ್ರೀಪಾದ ಹೆಗಡೆ ಮತ್ತು ವಿವೇಕಾನಂದ ಎನ್. ಹಾಗೂ ಕೋಶಾಧಿಕಾರಿಯಾಗಿ ಭೋಜ ಯು. ಆಯ್ಕೆಯಾದರು.
ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಪೂರ್ಣಿಮಾ ಸುರೇಶ್, ಭುವನಪ್ರಸಾದ್ ಹೆಗ್ಡೆ, ಕುತ್ಪಾಡಿ ವಿಠಲ ಗಾಣಿಗ, ವಿದ್ಯಾವಂತ ಆಚಾರ್ಯ, ರವೀಂದ್ರ ಕೆ.ಶೆಟ್ಟಿ ಕಡೆಕಾರು, ಆನಂದ ಮೆಲಾಂಟ, ಅಮಿತಾಂಜಲಿ ಕಿರಣ್, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಕೋಟ್ಯಾನ್, ವಿಷ್ಣುಮೂರ್ತಿ ಪ್ರಭು, ಹರೀಶ್ ಜಿ. ಕಲ್ಮಾಡಿ, ಶ್ರೀನಿವಾಸ್ ಆಚಾರ್ಯ ಅವರನ್ನು ಆರಿಸಲಾಯಿತು.
ಗೌರವ ಸಲಹಾ ಸಮಿತಿ ಹಾಗೂ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯರನ್ನು ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದು ರಂಗಭೂಮಿ ಪ್ರಕಟಣೆ ತಿಳಿಸಿದೆ.
Kshetra Samachara
19/07/2022 03:28 pm