ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ:ಮುನಿಯಾಲು ಗೋಧಾಮಕ್ಕೆ ಅಮೇರಿಕಾದ ವೀಣಾ ವೆಂಕಟ್ರಾಮಯ್ಯ ಭೇಟಿ

ಹೆಬ್ರಿ : ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್‌- ಗೋಧಾಮವನ್ನು ಪ್ರಕೃತಿ ರಮಣೀಯ ತಾಣದ ನಡುವೆ ಅತ್ಯುತ್ತಮವಾಗಿ ಸ್ಥಾಪಿಸಲಾಗಿದ್ದು, ಮನಸ್ಸಿಗೆ ಶಾಂತಿ ನೆಮ್ಮದಿ ನೀಡಿದೆ.ಭಾರತೀಯ ಗೋತಳಿಯ ಅಭಿವೃದ್ದಿಯ ಜೊತೆಗೆ ಗೋತಳಿಗಳ ಸಂರಕ್ಷಣೆ ಅತ್ಯಂತ ಪುಣ್ಯ ಮತ್ತು ಮಹತ್ವದ ಕಾರ್ಯದ. ಸುದ್ದಿ ತಿಳಿದು ಗೋಧಾಮದ ಸದಸ್ಯೆಯಾಗಿ ನನ್ನ ತಂದೆತಾಯಿ ಹೆಸರಿನಲ್ಲಿ ಗೋವನ್ನು ದತ್ತು ಪಡೆದು ಪೂಜಿಸುತ್ತಿದ್ದೇನೆ. ಇದು ನನ್ನ ಜೀವನದ ಸಾರ್ಥಕ ಕ್ಷಣ ಮತ್ತು ಪುಣ್ಯಭೂಮಿ ಗೋಧಾಮದ ಭೇಟಿ ಮರೆಯಲಾಗದ ಕ್ಷಣ ಎಂದು ಬೆಂಗಳೂರು ಮೂಲದ ಅಮೇರಿಕಾ ವಾಸಿ ವೀಣಾ ವೆಂಕಟ್ರಾಮಯ್ಯ ಹೇಳಿದರು.

ಅವರು ತಮ್ಮ ಕೌಟುಂಬಿಕ ತಂಡದೊಂದಿಗೆ ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿರುವ ದೇಶೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್‌- ಗೋಧಾಮಕ್ಕೆ ಭೇಟಿ ನೀಡಿ ದೇಶಿಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳ ಅಧ್ಯಯನ ನಡೆಸಿ ಬಳಿಕ ಗೋಪೂಜೆ ಸಲ್ಲಿಸಿ ಮಾತನಾಡಿದರು.

ವಿಶಾಲವಾದ ಗೋಧಾಮದಲ್ಲಿ ಭಾರತೀಯ ಗೋತಳಿಗಳು, ಗೋವಿನ ಇತರ ಉತ್ಪನ್ನಗಳು, ಗೋವು ಆಧಾರಿತ ಕೃಷಿ ಪದ್ಧತಿ,ಸಾವಯವ ಕೃಷಿ ಪದ್ಧತಿಯ ಸಹಿತ ಸಮಗ್ರ ಅಧ್ಯಯನ ನಡೆಸಿದರು. ಮುನಿಯಾಲು ಗೋಧಾಮದಲ್ಲಿ ಅದ್ಬುತ ಅನುಭವವಾಗಿದೆ ಎಂದು ವೀಣಾ ವೆಂಕಟ್ರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಮಗಳು ಅನನ್ಯ ಅವರ ಹುಟ್ಟುಹಬ್ಬವನ್ನು ಗೋಮಾತೆಯ ಪೂಜೆಯೊಂದಿಗೆ ಆಚರಿಸಿ ಸಂಭ್ರಮಿಸಿದರು.ಬಳಿಕ ಗೋಧಾಮದಲ್ಲಿ ಗೋಪಾಲಕೃಷ್ಣ ದೇವರು ಮತ್ತು ಗೋವಿನ ಪೂಜೆ ನೆರವೇರಿಸಿದರು.

Edited By : PublicNext Desk
Kshetra Samachara

Kshetra Samachara

30/06/2022 04:59 pm

Cinque Terre

1.17 K

Cinque Terre

0

ಸಂಬಂಧಿತ ಸುದ್ದಿ