ಪಡುಬಿದ್ರಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಂಗಳವಾರ ಮಂಗಳೂರು ವಿಭಾಗದ ಎನ್.ಸಿ.ಸಿ ಭೂ ದಳ, ವಾಯು ದಳ, ನೌಕಾದಳದ ವಿದ್ಯಾರ್ಥಿಗಳು ಪಡುಬಿದ್ರೆ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ಯೋಗ ಮಾಡಿದರು.
ಮಂಗಳೂರು ಎನ್.ಸಿ.ಸಿ ವಿಭಾಗ, ಆಯುಷ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಬ್ಲೂ ಫ್ಲ್ಯಾಗ್ ಬೀಚ್ ನ ನಿರ್ವಹಣಾ ಮಂಡಳಿಯ ಜಂಟಿ ಆಶ್ರಯದಲ್ಲಿ ಯೋಗ ದಿನಾಚರಣೆ ನಡೆಯಿತು.
ತುಂತುರು ಮಳೆಯಲ್ಲಿ ಎನ್.ಸಿ.ಸಿ ಯ ವಿದ್ಯಾರ್ಥಿಗಳು, ಅಧಿಕಾರಿಗಳು, ಬ್ಲೂ ಫ್ಲ್ಯಾಗ್ ಬೀಚ್ ನ ಸಿಬ್ಬಂದಿಗಳು ಒಂದು ಗಂಟೆಗಳ ಕಾಲ ಯೋಗ ಮಾಡಿದರು.
ಕರ್ನಲ್ ಎನ್.ಆರ್.ಭಿಡೆ, ಕರ್ನಲ್ ಅಮಿತಾಬ್ ಸಿಂಗ್, ಕರ್ನಲ್ ಅನಿಲೇಶ್ ಕೌಶಿಕ್, ಲೆ| ಕರ್ನಲ್ ಆರ್.ಕೆ.ಸಿಂಗ್, ಲೆ| ಕರ್ನಲ್ ಎಸ್.ಕೋಟ್ವಾಲ್, ವಿಂಗ್ ಕಮಾಂಡರ್ ಚಂದನ್ ಗಾರ್ಗ್, ಲೆ| ಕಮಾಂಡರ್ ರಿಕ್ಕಿ ಲಿಯೋನಾರ್ಡ್ ಪೆರಿರಾ, ಲೆ| ಕಮಾಂಡರ್ ಭಾರತ್ ಕುಮಾರ್ ರಾವ್, ಆಯುಷ್ ಇಲಾಖೆಯ ಡಾ| ಸೈಯದ್, ಪ್ರವಾಸೋದ್ಯಮ ಇಲಾಖೆಯ ಭವೇಶ್ ಉಪಸ್ಥಿತರಿದ್ದರು.
Kshetra Samachara
21/06/2022 09:15 pm