ಉಡುಪಿ: ರಾಗಧನ ಸಂಸ್ಥೆ ಉಡುಪಿ(ರಿ) ಇದರ ಆಶ್ರಯದಲ್ಲಿ ಕಲಾವಿಹಾರಿ ಎ.ಈಶ್ವರಯ್ಯ ಸ್ಮರಣಾರ್ಥ ಅವರ ಕುಟುಂಬದವರು ಕೊಡಮಾಡುವ ಈ ವರ್ಷದ "ಕಲಾಪ್ರವೀಣ" ಪ್ರಶಸ್ತಿಗೆ ಖ್ಯಾತ ಹಿರಿಯ ವಿಮರ್ಶಕರು, ಸಾಹಿತಿಗಳೂ ಆದ ಬೆಂಗಳೂರಿನ ಎಸ್ ದಿವಾಕರ್ ಅವರು ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು ಹತ್ತು ಸಾವಿರ ನಗದನ್ನು ಒಳಗೊಂಡಿರುತ್ತದೆ.
ಮೇ. ಹದಿನೈದು ಆದಿತ್ಯವಾರದಂದು ಅಪರಾಹ್ನ ಮೂರುಗಂಟೆಗೆ ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಸಭಾಂಗಣದಲ್ಲಿ ಖ್ಯಾತ ಅಂಕಣಕಾರ, ಸಾಹಿತಿ ಪ್ರೊ. ಮುರಲೀಧರ ಉಪಾಧ್ಯ ಹಿರಿಯಡ್ಕ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಶಿಕ್ಷಣ ತಜ್ಞ ಹಾಗೂ ಸಾಹಿತಿ ಡಾ.ಮಹಾಬಲೇಶ್ವರ ರಾವ್ ಅಭಿನಂದನಾ ಭಾಷಣ ಮಾಡಲಿದ್ದಾರೆ.ನಂತರ ಬೆಂಗಳೂರಿನ ಕು.ಅದಿತಿ ಪ್ರಹ್ಲಾದ್ ಅವರ ಸಂಗೀತ ಕಚೇರಿ ನಡೆಯಲಿದೆ.ಪಿಟೀಲಿನಲ್ಲಿ ಕು. ತನ್ಮಯಿ ಉಪ್ಪಂಗಳ,ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್ ಅವರು ಸಹಕರಿಸಲಿದ್ದಾರೆ ಎಂದು "ರಾಗಧನ"ದ ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
02/05/2022 01:09 pm