ಕುಂದಾಪುರ :ಮೊಳಹಳ್ಳಿ ಮೂಲದ ಯಶಸ್ವಿ ಉದ್ಯಮಿಗಳಾದ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ & ದಂಪತಿ ಶಶಿ ಹೆಗ್ಡೆ ಹಾಗೂ ಕೈಲ್ಕೆರೆ ಕಿಶೋರ್ ಕುಮಾರ್ ಹೆಗ್ಡೆ &ಸುರೇಖಾ ಹೆಗ್ಡೆ ದಂಪತಿಗಳಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ. ಎಂ. ಶಾಂತರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನೆಡೆಯಿತು. ಮೂಡಬಿದ್ರೆ ಆಳ್ವಾಸ್ ಎಜುಕೇಷನ್ ಟ್ರಸ್ಟ್ ಮೋಹನ್ ಆಳ್ವ ಉದ್ಯಮಿಗಳನ್ನು ಸನ್ಮಾನಿಸಿ ಗೌರವಿಸಿದರು. ತದನಂತರ ಮಾತನಾಡಿ ಯಾರು ತುಳಿಯದ ಹಾಗೂ ಯಾರು ತಿಳಿಯದ ದಾರಿಯನ್ನು ಅರಿತು ಪರಿಶ್ರಮದ ಮೂಲಕ ಮೇಲೆದ್ದು ಬರುವವರು ನಿಜವಾದ ಸಾಧಕರು ಅದಕ್ಕೆ ಉತ್ತಮ ಉದಾಹರಣೆ ಈ ದಂಪತಿಗಳು ಎಂದರು.
ಹಾಗೇ ಕಾರ್ಯಕ್ರಮದಲ್ಲಿ ಎಂ.ಎಂ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಎಂ. ಮಹೇಶ್ ಹೆಗ್ಡೆ, ಮೊಳಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಇಂದಿರಾ ಯು ಶೆಟ್ಟಿ, ಸನ್ಮಾನ ಸಮಿತಿ ಗೌರವಾಧ್ಯಕ್ಷ ಹೆಚ್. ಜಯಶೀಲ ಶೆಟ್ಟಿ, ಕೋಶಾಧಿಕಾರಿ ಕಿಶೋರ್ ಶೆಟ್ಟಿ, ಅಧ್ಯಕ್ಷ ಎಂ. ದಿನೇಶ್ ಹೆಗ್ಡೆ, ಕಾರ್ಯದರ್ಶಿ ಶಾಂತರಮ ಶೆಟ್ಟಿ ಉಪಸ್ಥಿತರಿದ್ದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಹಾಗೂ ರಾಜಶೇಖರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
Kshetra Samachara
12/04/2022 07:22 am