ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವೀರ ಸಮರ ಸೇನಾನಿಗೆ 'ಯಕ್ಷಗಾನಾಂಜಲಿ...'

ಉಡುಪಿ: ಕರಾವಳಿಯ ಮೇರು ಕಲೆ 'ಯಕ್ಷಗಾನ' ಜಗತ್ತಿನ ಪ್ರತಿಯೊಂದು ಆಗುಹೋಗು, ಘಟನೆ, ದುರಂತಕ್ಕೂ ಮಿಡಿಯುತ್ತದೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ದೇಶದೆಲ್ಲೆಡೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ. ಅದೇ ರೀತಿ ಯಕ್ಷಗಾನ ಕಲಾವಿದರೂ ವೀರ ಸೇನಾನಿಯ ದುರಂತ ಸಾವಿಗೆ ಮರುಗಿದ್ದಾರೆ.

ಬಾಳಿಯೂರಿನಲ್ಲಿ ನಡೆದ ಹನುಮಗಿರಿ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಜ. ಬಿಪಿನ್ ರಾವತ್ ಅವರಿಗೆ ಯಕ್ಷಗಾನ ಶೈಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದು ಅರ್ಥಪೂರ್ಣವಾಗಿತ್ತು.

ಗಾನಸುರಭಿ ರವಿಚಂದ್ರ ಕನ್ನಡಿಕಟ್ಟೆ ಅವರಿಂದ ಈ ಯಕ್ಷಗಾನಾಂಜಲಿ ನಡೆಯಿತು. ಹಾಡನ್ನು ಯೋಗೀಶ್ ರಾವ್ ಚಿಗುರುಪಾದೆ ರಚಿಸಿದ್ದು, ಈ ವಿಶೇಷ ಶ್ರದ್ಧಾಂಜಲಿ ಸಾರ್ವಜನಿಕರ, ಯಕ್ಷಗಾನ ಪ್ರೇಮಿಗಳ ಮನ ಸೆಳೆಯುತ್ತಿದೆ.

Edited By : PublicNext Desk
Kshetra Samachara

Kshetra Samachara

13/12/2021 03:04 pm

Cinque Terre

1.76 K

Cinque Terre

0

ಸಂಬಂಧಿತ ಸುದ್ದಿ