ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾದದಲ್ಲಿ ಲೀನರಾದ ವಿದುಷಿ ವಸಂತಿಯಕ್ಕ

ಉಡುಪಿ: ವಿದುಷಿ ಶ್ರೀಮತಿ ವಸಂತಿ ರಾಮ ಭಟ್ ವಯೋಸಹಜ ಕಾಯಿಲೆಯಿಂದ ನಾದಲೀನರಾಗಿದ್ದಾರೆ.ಅವರಿಗೆ 82 ವರ್ಷ ವಯಸ್ಸಾಗಿತ್ತು. 1938ರಲ್ಲಿ ಜನಿಸಿದ್ದ ವಿದುಷಿ ವಸಂತಿ ,ಎಂ.ಜಿ.ಎಂ.ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ರಾಮ ಭಟ್ ಅವರ ಧರ್ಮಪತ್ನಿ. ರಾಗಧನ ಸಂಸ್ಥೆಯ ಸಕ್ರಿಯ ಕಾರ್ಯಕಾರಿ ಸಮಿತಿ ಸದಸ್ಯೆ. ಹಲವಾರು ಸಂಗೀತಗಾರರಿಗೆ ಸಾಥ್ ನೀಡಿದ ಉಡುಪಿಯ ಹೆಮ್ಮೆಯ ಕಲಾವಿದೆ.

ನೂರಾರು ಶಿಷ್ಯರಿಗೆ ವಯಲಿನ್ ತರಬೇತಿ ನೀಡಿರುತ್ತಾರೆ. ಮಗ ಡಾ.ಸತೀಶ್, ನೇತ್ರ ತಜ್ಞ, ಮಗಳು ವಿನಯ ಕಂಪ್ಯೂಟರ್ ಇಂಜಿನಿಯರ್. ಪುತ್ರ ದೇವೇಶ್ ಭಟ್ ಮೃದಂಗ ವಿದ್ವಾನ್.

ತಾಯಿಯ ತಂದೆ ಪಿಡ್ಲು ಕೃಷ್ಣರಾಯರು, ಉಡುಪಿ ಲಕ್ಷ್ಮೀ ಬಾಯಿ ಇವರ ಸಂಗೀತ ಗುರುಗಳು, ಗುರುಗಳ ಹೆಸರಲ್ಲಿ ನಿರಂತರ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದರು.ಉತ್ತಮ ಟೆನಿಸ್ ಚಾಂಪಿಯನ್ ಆಗಿದ್ದವರು. ಪ್ರಪಂಚಂ ಸೀತಾರಾಂ, ಆರ್.ಕೆ.ಪದ್ಮನಾಭ, ಲುಡ್ವಿಗ್ ಪೆಶ್ಚ್, ಕದ್ರಿ ಗೋಪಾಲನಾಥ್ ಸೇರಿದಂತೆ ಬಾಲಪಾಠದಲ್ಲಿರುವ ಮಕ್ಕಳಿಗೂ ವಯೊಲಿನ್ ಸಾಥ್ ನೀಡುತ್ತಿದ್ದರು. ಮೃತರು ಅಸಂಖ್ಯ ಶಿಷ್ಯವೃಂದವನ್ನು ಅಗಲಿದ್ದಾರೆ.

Edited By : PublicNext Desk
Kshetra Samachara

Kshetra Samachara

06/12/2021 04:20 pm

Cinque Terre

794

Cinque Terre

0

ಸಂಬಂಧಿತ ಸುದ್ದಿ