ಕಾರ್ಕಳ: ಮಹಿಳೆಯರು ಸ್ವಾವಲಂಬಿಗಳಾಗಿ ಬಾಳಬೇಕು, ಆಗ ಮಾತ್ರ ಮಹಿಳೆಯರಿಗೆ ಸಮಾನತೆ, ಗೌರವ ,ಸಮ್ಮಾನ ಸಿಗಲು ಸಾಧ್ಯ ಎಂದು ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಹೇಳಿದರು.
ಅವರು ಶ್ರೀನಿವಾಸ ಸೇವಾ ಟ್ರಸ್ಟ್ (ರಿ) ಹಾಗೂ ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ಆಂಡ್ ಪ್ಯಾಬ್ರಿಕ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ 3 ದಿನಗಳ ಪ್ಯಾಬ್ರಿಕ್ ಪೈಂಟಿಂಗ್ ಹಾಗೂ ಕ್ಲೆ ಜುವೆಲ್ಲರಿ ತಯಾರಿಸುವ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆಯರು ತಮ್ಮ ಪದವಿ ವಿಧ್ಯಾಭ್ಯಾಸ ವನ್ನು ಮುಗಿಸಿದ ನಂತರ ಸರಕಾರಿ ಕೆಲಸಕ್ಕಾಗಿ ಕಾದು ಕುಳಿತುಕೊಳ್ಳುವ ಬದಲು ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವಂತಹ ಇಂತಹ ಪ್ಯಾಶನ್ ಡಿಸೈನಿಂಗ್ ಕೋರ್ಸ್‌ಗಳನ್ನು ಕಲಿತು ಆದಾಯ ಗಳಿಸುವ ಮೂಲಕ ತಾನು ಅಬಲೆಯಲ್ಲ, ತಾನೂ ಕೂಡ ಪುರುಷರಂತೆ ಅತ್ಯುತ್ತಮ ಸ್ವ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಧೈರ್ಯ ಪಡೆಯಬಹುದು. ಮಹಿಳೆಯರು ಸ್ವ ಇಚ್ಛೆಯಿಂದ ಸ್ವ ಉದ್ಯೋಗವನ್ನು ಮಾಡುವ ಮೂಲಕ ತಮ್ಮ ಕುಟುಂಬದ ಆಧಾರ ಸ್ಧಂಭಗಳಾಗಬಹುದು ಎಂದರು.
ಕಾರ್ಯಕ್ರಮದ ಮಖ್ಯ ಅತಿಧಿ ಹಾಗೂ ಶಿಬಿರದ ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಪುಷ್ಪಾಂಜಲಿ ರಾವ್ ಬಾಗವಹಿಸಿ ಶಿಬಿರದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
ಸುಮೇಧ ಪ್ಯಾಶನ್ ಇನ್ಸ್ಟಿಟ್ಯೂಟ್ ಇದರ ಪ್ರಾಂಶುಪಾಲ ಸಾಧನ ಜಿ ಆಶ್ರಿತ್ ರವರು ಪ್ರಸ್ತಾವನೆ ಹಾಗೂ ಮಾಹಿತಿ ನೀಡಿದರು.
ಈ ಶಿಬಿರದಲ್ಲಿ ಬ್ಲೌಸ್ ಎಂಬ್ರಾಯ್ಡರಿ ಪೈಂಟಿಂಗ್, ಟೈ ಆಂಡ್ ಡ್ರೈ, ಪ್ಯಾಚ್
ವರ್ಕ್,ಕಚ್ ವರ್ಕ್,ಜುವೆಲ್ಲರಿ ಮೇಕಿಂಗ್ ಮುಂತಾದ ವಿಷಯದಲ್ಲಿ ತರಬೇತಿ ನೀಡಲಾಯಿತು.
ಜಯಂತಿ ಸ್ವಾಗತಿಸಿ,ಚಂದನ ಹೇರೂರು ದನ್ಯವಾದವಿತ್ತರು.
Kshetra Samachara
19/11/2021 05:46 pm