ಬ್ರಹ್ಮಾವರ: ತಾಲೂಕು ವ್ಯಾಪ್ತಿಯ ಯಡ್ತಾಡಿ ಗ್ರಾಮದ ಅಲ್ಲಾರು ಸಮೀಪದ ಹಾಡಿಯಲ್ಲಿ ನಡೆಯುತ್ತಿದ್ದ ಇಸ್ವೀಟು ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ರಮೇಶ ಕುಲಾಲ, ಪ್ರಶಾಂತ ಹೆಚ್ ಪೂಜಾರಿ, ಮಂಜುನಾಥ ಪೂಜಾರಿ, ಉಮೇಶ, ಪ್ರವೀಣ್ ಶೆಟ್ಟಿ, ಮತ್ತು ಅಣ್ಣು ಪೂಜಾರಿ ಆರೋಪಿಗಳು.ದಾಳಿ ವೇಳೆ ಇಬ್ಬರು ಪರಾರಿಯಾಗಿದ್ದಾರೆ.
ಯಡ್ತಾಡಿ ಗ್ರಾಮದ ಅಲ್ತಾರು ಎಂಬಲ್ಲಿನ ಹಾಡಿಯಲ್ಲಿ ಕೆಲವರು ಸೇರಿಕೊಂಡು ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ 5 ಮಂದಿಯನ್ನು ವಶಕ್ಕೆ ಪಡೆದು ಅವರಿಂದ ಆಟಕ್ಕೆ ಬಳಸಿದ 3,730 ರೂ. ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/09/2022 08:46 pm