ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣಮಠಕ್ಕೆ ಬಂದಿದ್ದ ಕೇರಳದ ಮಹಿಳೆಯ ಸರ ಕಳ್ಳತನ

ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ದರ್ಶನಕ್ಕೆಂದು ಬಂದಿದ್ದ ಕೇರಳದ ಮಹಿಳೆಯ ಸರ ಕಳವಾಗಿರುವ ಘಟನೆ ಕೃಷ್ಣಮಠದಲ್ಲಿ ಸಂಭವಿಸಿದೆ.

ಕೇರಳದ ಸರಸ್ವತಿ (71) ಸರ ಕಳೆದುಕೊಂಡ ಮಹಿಳೆ. ಇವರು ಕುಟುಂಬದೊಂದಿಗೆ ಉಡುಪಿ ಕೃಷ್ಣ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದಿದ್ದರು. ನಂತರ ಅನಂತೇಶ್ವರ ದೇವಾಸ್ಥಾನದ ಬಳಿ ಹೋಗಿ ನೋಡಿದಾಗ ಅವರು ಧರಿಸಿದ್ದ 32 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ಕಂಡುಬಂದಿದೆ.ಈ ಬಗ್ಗೆ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

10/12/2024 05:30 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ