ಉಡುಪಿ: ಕುತ್ಪಾಡಿ ಗ್ರಾಮದ ಬಲಾಯಿಪಾದೆಯಲ್ಲಿರುವ ಅಂಗಡಿಗೆ ನುಗ್ಗಿದ ಕಳ್ಳರು 5.47 ಲಕ್ಷ ರೂ. ಮೌಲ್ಯದ ಸಿಗರೇಟ್ ಪ್ಯಾಕ್ ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಆನಂದ ಭಟ್ ಅವರು ಪ್ರಶಾಂತ್ ಶೆಟ್ಟಿ ಎಂಬುವವರೊಂದಿಗೆ ಉಡುಪಿಯ ಕುತ್ಪಾಡಿ ಗ್ರಾಮದ ಬಲಾಯಿಪಾದೆಯಲ್ಲಿ ಸಮೃದ್ಧಿ ಎಂಟರ್ ಪ್ರೈಸಸ್ ಎಂಬ ಡಿಸ್ಟ್ರಿಬ್ಯೂಶನ್ ಅಂಗಡಿಯನ್ನು ನಡೆಸಿಕೊಂಡಿದ್ದರು. ಅದರಲ್ಲಿ ಐ.ಟಿ.ಸಿ ಕಂಪೆನಿಯ ಸಿಗರೇಟ್ ಮತ್ತು ಇತರ ಪದಾರ್ಥಗಳನ್ನು ಸಂಗ್ರಹಿಸಿಡುತ್ತಿದ್ದರು.
ಜೂ.21 ರಂದು ರಾತ್ರಿ ವೇಳೆ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕ್ಯಾಶ್ ಡ್ರಾವರ್ ನಲ್ಲಿದ್ದ 17,000 ರೂ. ನಗದು ಹಾಗೂ 5,47,744 ರೂ. ಮೌಲ್ಯದ ಐಟಿಸಿ ಕಂಪೆನಿಯ ಸಿಗರೇಟ್ ಪ್ಯಾಕ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/06/2022 04:59 pm