ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವರದಕ್ಷಿಣೆ ಕಿರುಕುಳ, ಹಲ್ಲೆ , ಜೀವಬೆದರಿಕೆ: ದೂರು ದಾಖಲು

ಉಡುಪಿ: ಚೇರ್ಕಾಡಿ, ಕುದುಂಜೆ ನಿವಾಸಿ ವೀಣಾ ರತ್ನಾಕರ ಶೆಟ್ಟಿ ಪತಿ ರತ್ನಾಕರ ಶೆಟ್ಟಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ. 1999ರ ಮೇ 24ರಂದು ರತ್ನಾಕರ ಶೆಟ್ಟಿ ಅವರೊಂದಿಗೆ ಬ್ರಹ್ಮಾವರದಲ್ಲಿ ವಿವಾಹವಾಗಿದ್ದು, ಆರೋಪಿಗಳು 10 ಲ.ರೂ. ನಗದು, 15 ಪವನ್ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು.

ಒತ್ತಡಕ್ಕೆ ಮಣಿದ ಮನೆಯವರು 3.60 ಲ.ರೂ. ನಗದು, 15 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ವಿವಾಹವಾದ ಒಂದು ತಿಂಗಳಲ್ಲಿ ಕಡಿಮೆ ವರದಕ್ಷಿಣೆ ವಿಚಾರದಲ್ಲಿ ಮಾನಸಿಕ ಹಿಂಸೆ ನೀಡಿದ್ದು, ಪತಿ ರತ್ನಾಕರ ಅವರು ಚೇರ್ಕಾಡಿಯ ರಾಜೀವಿ ಶೆಟ್ಟಿ, ರವಿರಾಜ್ ಶೆಟ್ಟಿ ಉಳ್ಳೂರಿನ ವಸಂತ ಜೆ. ಶೆಟ್ಟಿ ಅವರ ಪ್ರಚೋದನೆಯಿಂದ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

09/06/2022 05:18 pm

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ