ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಾರು ಓವರ್ ಟೇಕ್ ಮಾಡಿದ್ದಕ್ಕೆ ಹಲ್ಲೆ: ಮೂಳೆ ಮುರಿತ

ಉಡುಪಿ: ಕಾರನ್ನು ಓವರ್‌ಟೇಕ್ ಮಾಡಿದ್ದಕ್ಕೆ ವ್ಯಕ್ತಿಯೋರ್ವರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕಟಪಾಡಿಯ ಚೇತನರಾಜ್ ಎಂಬವರು ತಮ್ಮ ಕಾರಿನಲ್ಲಿ ಸರಳೇಬೆಟ್ಟಿನಿಂದ ಮಣಿಪಾಲದ ಟೈಗರ್ ಸರ್ಕಲ್ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿರುವಾಗ ಸಿಂಡಿಕೇಟ್ ಸರ್ಕಲ್ ಬಳಿ ಅಕ್ರಮ್ ಮತ್ತು ಸೈಫ್ ಚಲಾಯಿಸಿಕೊಂಡು ಹೋಗುತ್ತಿದ್ದ ಫಾರ್ಚೂನ್ - ಕಾರನ್ನು ಓವರ್ ಟೇಕ್ ಮಾಡಿದ್ದರು.

ಇಷ್ಟಕ್ಕೇ ಆರೋಪಿಗಳು ಚೇತನರಾಜ್ ಕಾರನ್ನು ಹಿಂಬಾಲಿಸಿ ಇಂದ್ರಾಳಿಯಲ್ಲಿ ತಡೆದು ನಿಲ್ಲಿಸಿ ಕೈಯಿಂದ ಹಲ್ಲೆ ಮಾಡಿ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿ ತಲವಾರು, ಸ್ಟಂಪ್‌ನಿಂದ ಸೈಫ್, ಅಕ್ರಮ್ ಹಾಗೂ ಶರೀಫ್ ಸೇರಿ ಹಲ್ಲೆ ಮಾಡಿದ್ದಾರೆ. ಪರಿಣಾಮ ಚೇತನರಾಜ್ ಅವರ ಎಡಗೈಯ ಮೂಳೆ ಮುರಿತವಾಗಿದೆ. ದೂರು ನೀಡಿದಲ್ಲಿ ಇದು ನಿನಗೆ ಕೊನೆಯ ಎಚ್ಚರಿಕೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2

Edited By : PublicNext Desk
Kshetra Samachara

Kshetra Samachara

24/05/2022 01:08 pm

Cinque Terre

3.52 K

Cinque Terre

2

ಸಂಬಂಧಿತ ಸುದ್ದಿ