ಕುಂದಾಪುರ: ಕುಂದಾಪುರ ತಾಲೂಕಿನ ಕಂಡ್ಲೂರು ಎಂಬಲ್ಲಿ ರಸ್ತೆ ಮುಂದೆ ಪೋಲೀಸರ ಮೇಲೆ ಇಬ್ಬರು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಸಾರ್ವಜನಿಕರ ಶಾಂತಿಭಂಗಕ್ಕೆ ಮುಂದಾಗಿದ್ದ ಮನೀಶ್ ಎಂ.(23), ರಾಜೀವ್ ಕೊಲ್ಲು (37) ಎಂಬಾತರನ್ನು ಬಂಧಿಸಲು ಪೊಲೀಸರು ತೆರಳಿದ್ದು, ಆಗ ಆರೋಪಿಗಳು ಪೊಲೀಸರ ಸಮವಸ್ತ್ರ ಎಳೆದು ಹಲ್ಲೆ ನೆಡೆಸಿದ್ದಾರೆ ಎನ್ನಲಾಗಿದೆ. ಶಾಂತಿ ಭಂಗ ನೆಡೆಸಿ ಕರ್ತವ್ಯ ಅಡ್ಡಿಪಡಿಸಿದ ಕುರಿತು ಇದೀಗ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
28/04/2022 04:37 pm