ಉಡುಪಿ: ಅಸಹಾಯಕ ವೃದ್ಧ ಮಹಿಳೆಯೋರ್ವರು ತನಗೆ ಯಾರೂ ಆಶ್ರಯಕ್ಕೆ ಇಲ್ಲವೆಂದು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.ಬಳಿಕ ಅವರನ್ನು ರಕ್ಷಿಸಲಾಗಿತ್ತು.ಈ ಅನಾಥ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ವಶಕ್ಕೆ ಪಡೆದು ಬೈಲೂರಿನ ಗಂಗೋತ್ರಿ ಹಿರಿಯ ನಾಗರಿಕ ಆಶ್ರಮಕ್ಕೆ ದಾಖಲಿಸಿದ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಿಳೆಯ ಹೆಸರು ಕುಶಲ ಶೆಟ್ಟಿ (78) ಮೂಲತಃ ಉಡುಪಿ ಜಿಲ್ಲೆಯವರಾಗಿದ್ದು, ತಾನು ಹೆಸರಾಂತ ಮನೆತನದ ಕುಟುಂಬದಿಂದ ಬಂದಿದ್ದು, ಇದೀಗ ಗಂಡನನ್ನು ಕಳೆದುಕೊಂಡು ಮಕ್ಕಳಿಲ್ಲದ ತಾನು ಯಾರ ಆಶ್ರಯವಿಲ್ಲದೆ ಬೀದಿಗೆ ಬಿದ್ದು ಅಸಹಾಯಕಳಾಗಿ ಬದುಕುವುದು ಬೇಡವೆಣಿಸಿ ಬಾವಿಗೆ ಹಾರಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
ಮಹಿಳೆಯನ್ನು ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಸಮಾಲೋಚನೆ ನಡೆಸಿ ಧೈರ್ಯ ತುಂಬಿದ್ದಾರೆ. ಹಿರಿಯ ನಾಗರಿಕ ಸಹಾಯವಾಣಿಯ ಪೂರ್ಣಿಮಾ ಹಾಗೂ ರಂಜಿತ್ ಕಾನೂನು ಪ್ರಕ್ರಿಯೆ ನಡೆಸಿದರು. ಸ್ಪಂದಿಸುವ ಸಂಬಂಧಿಕರಿದ್ದಲ್ಲಿ ಹಿರಿಯ ನಾಗರಿಕ ಸಹಾಯವಾಣಿ ಉಡುಪಿ(0820-2526394) ಸಂಪರ್ಕಿಸಬಹುದು.
Kshetra Samachara
23/11/2021 07:16 pm