ಉಡುಪಿ: ಹೆಬ್ರಿಯ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಶುಕ್ರವಾರ ನಡೆದಿದೆ.
ಬಾದಗುದ್ದೆಯ ಹೆಬ್ರಿ ಬಳಿಯ ಬಾಡಿಗೆ ಮನೆಯಲ್ಲಿದ್ದ ವೆಂಕಟೇಶ್ ಎಂಬುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕೋಣೆ ಸೀಲಿಂಗ್ ಫ್ಯಾನ್ ಗೆ ನೇತಾಡುತ್ತಿದ್ದ ವೆಂಕಟೇಶ್ ಮೃತ ದೇಹ ಪತ್ತೆಯಾಗಿದೆ. ರೋನಾ ಮೂಲದ ವೆಂಕಟೇಶ್ ಶಿರ್ಸಿಯ ಯುವತಿಯನ್ನು ಪ್ರೀತಿಸಿ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಶುಕ್ರವಾರ ಕರ್ತವ್ಯ ಮುಗಿಸಿ ಮನೆಗೆ ಬಂದ ವೆಂಕಟೇಶ್ ತಕ್ಷಣ ಮನೆಗೆ ಬರುವಂತೆ ಖಾಸಗೀ ಕಾಲೇಜಿನ ಪ್ರೊಫೆಸರ್ ಆಗಿರುವ ಪತ್ನಿಗೆ ಮೆಸೇಜ ಹಾಕಿದ್ದಾರೆ. ಕೂಡಲೇ ಮನೆಗೆ ಬಂದು ನೋಡಿದಾಗ ಪತಿ ವೆಂಕಟೇಶ್ ಶವವಾಗಿ ಪತ್ತೆಯಾಗಿದ್ದಾರೆ.
Kshetra Samachara
02/01/2021 03:30 pm