ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೆಲಸ ಮುಗಿಸಿ ಬರುತ್ತಿದ್ದ ಯುವಕನ ದರೋಡೆ ಯತ್ನ, ಹಣಕ್ಕಾಗಿ ಚೂರಿ ತೋರಿಸಿ ಬೆದರಿಕೆ

ಉಡುಪಿ: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಚೂರಿ ತೋರಿಸಿ ಹಣಕ್ಕಾಗಿ ಬೆದರಿಸಿ ದರೋಡೆಗೆ ಯತ್ನಿಸಿದ ಘಟನೆ ಉಡುಪಿ ನಗರ ಹೊರವಲಯದ ಮಣಿಪಾಲ ಠಾಣೆ ವ್ಯಾಪ್ತಿಯ ಅಲೆವೂರು ಗುಡ್ಡೆ ಅಂಗಡಿ ಬಳಿ ಇಂದು ನಡೆದಿದೆ.

ಮಣಿಪಾಲದಲ್ಲಿ ನೈಟ್ ಡ್ಯೂಟಿ ಮುಗಿಸಿ ಬರುತ್ತಿದ್ದ ಯುವಕನನ್ನು ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ.

ಚೂರಿ ತೋರಿಸಿ ಹಣಕ್ಕಾಗಿ ದುಷ್ಕರ್ಮಿಗಳು ಬೆದರಿಸಿದಾಗ ಯುವಕ ಬೊಬ್ಬೆ ಹೊಡೆದು ಜನರನ್ನು ಕರೆದಿದ್ದಾನೆ. ಈ ವೇಳೆ ಮೊಬೈಲ್ ಕಸಿದು ದುಷ್ಕರ್ಮಿಗಳು

ಪರಾರಿಯಾಗಿದ್ದಾರೆ.

ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Edited By :
Kshetra Samachara

Kshetra Samachara

19/09/2020 12:10 pm

Cinque Terre

15.57 K

Cinque Terre

0

ಸಂಬಂಧಿತ ಸುದ್ದಿ