ಉಡುಪಿ: ಇಲ್ಲಿನ ಕಡಿಯಾಳಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯೊಬ್ಬರು ವಾಪಸ್ಸು ನಡೆದುಕೊಂಡು ಹೋಗುತ್ತಿದ್ದ ವೇಳೆ ಆಗಂತುಕನೋರ್ವ ಹಿಂದಿನಿಂದ ಬಂದು ಮಹಿಳೆ ಧರಿಸಿದ್ದ 2.30 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ಎಂಜಿಎಂ ಕಾಲೇಜು ಮೈದಾನದ ಸಮೀಪ ನಡೆದಿದೆ.
ನಿನ್ನೆ ಸಂಜೆ ವೇಳೆ ಕುಂಜಿಬೆಟ್ಟು ನಿವಾಸಿ ಪ್ರೇಮಾ ಶೇಣವ ಎಂಬವರು ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಹೋಗಿ, ವಾಪಾಸು ಮನೆ ಕಡೆಗೆ ಒಬ್ಬರೇ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಎಂಜಿಎಂ ಕಾಲೇಜು ಮೈದಾನದ ಗೇಟಿನ ಎದುರು ತಲುಪುವಾಗ ಅಂದಾಜು 25 ರಿಂದ 30 ವರ್ಷದ ಅಪರಿಚಿತ ಯುವಕ ಏಕಾಏಕಿ ಹಿಂದಿನಿಂದ ಬಂದು ಪ್ರೇಮಾ ಶೇಣವರವರನ್ನು ಕೈಗಳಿಂದ ಗಟ್ಟಿಯಾಗಿ ಹಿಡಿದು, ಅವರು ಧರಿಸಿದ್ದ ಸುಮಾರು 2,30,000 ರೂ. ಮೌಲ್ಯದ 50 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರೇಮಾ ಶೇಣವ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/10/2022 03:38 pm