ಕಾಪು: ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೆಕ್ಸ್ ಬಳಿ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಇಟ್ಟು ಮಾರಾಟ ಮಾಡಲು ಕಾಯುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಗ್ರಾಮ ಸಂತೆಕಟ್ಟೆ ಹಾಗೂ ಎಲ್.ವಿ.ಟಿ. ಬಸ್‌ಸ್ಟ್ಯಾಂಡ್ ಬಳಿಯ ನಿವಾಸಿ ಮೊಹಮ್ಮದ್ ಅಲಿ(33), ಶಿವಳ್ಳಿ ಗ್ರಾಮದ ಮೂಡು ಪೆರಂಪಳ್ಳಿ ಯುವಕ ಮಂಡಲ ಬಳಿಯ ನಿವಾಸಿ ಶ್ರೀಧರ(32)ಬಂಧಿತರು.
ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾಪು ಠಾಣೆ ಪಿ.ಎಸ್.ಐ. ರಾಜಶೇಖರ ಬಿ.ಸಾಗನೂರ್ ಸಿಬ್ಬಂದಿ ಜತೆ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, 1 ಕೆ.ಜಿ. 161 ಗ್ರಾಂ ಗಾಂಜಾ, ಎರಡು ಮೊಬೈಲ್, 18,600 ರೂ., ವೆಯಿಂಗ್ ಮೆಷಿನ್ ಮತ್ತು ಗಾಂಜಾ ಮಾರಾಟಕ್ಕೆ ಉಪಯೋಗಿಸುವ ಸೊತ್ತು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿದ್ದಾರೆ.
ಸೊತ್ತುಗಳ ಒಟ್ಟು ಮೌಲ್ಯ 2,24,600 ಎಂದು ಅಂದಾಜಿಸಲಾಗಿದೆ.
ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕಾಪು ಠಾಣಾ ಪಿ.ಎಸ್.ಐ.ರಾಜಶೇಖರ್ ಬಿ. ಸಾಗನೂರ್, ಪಿ.ಎಸ್.ಐ. ಐ.ಆರ್.ಗಡ್ಡೇಕರ್, ಪ್ರೊಬೆಷನರಿ ಪಿ.ಎಸ್.ಐ. ಅನಿಲ್ ಬಿ.ಎಮ್., ಹೆಚ್.ಸಿ. ನಾರಾಯಣ, ರವಿಕುಮಾರ್,ಮಹಾಬಲ ಶೆಟ್ಟಿಗಾರ್, ಮಹಮ್ಮದ್ ರಫೀಕ್, ಸಂದೇಶ, ಆನಂದ, ಅರುಣ ಕುಮಾರ್, ಪರಶುರಾಮ, ರಾಘವೇಂದ್ರ ಭಾಗವಹಿಸಿದ್ದಾರೆ.
Kshetra Samachara
03/10/2020 03:24 pm