ಉಡುಪಿ: ವಿದ್ಯಾರ್ಥಿನಿ ರಕ್ಷಿತಾ ನಾಯಕ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರಶಾಂತ್ ಮೊಗವೀರನನ್ನು ಬಂಧಿಸಿರುವ ಪೊಲೀಸರು ಮೂರು ದಿನ ಕಸ್ಟಡಿಗೆ ಪಡೆದಿದ್ದಾರೆ.
ಆರೋಪಿ ಪ್ರಶಾಂತ್ ಮೊದಲೇ ಮದುವೆಯಾಗಿರುವುದನ್ನು ರಕ್ಷಿತಾಳಿಂದ ಮುಚ್ಚಿಟ್ಟಿದ್ದ. ಉಡುಪಿಯ ಅಂಬಾಗಿಲು ಬಳಿ ಬಾಡಿಗೆ ಮನೆ ಪಡೆದು ಆಕೆಗೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದ. ಮದ್ಯಪಾನ ಸಿಗರೇಟು ಸೇವನೆಯ ಚಟಗಳನ್ನು ಕಲಿಸಿದ್ದನು.
ಉಡುಪಿ ನಗರ ಠಾಣಾ ಪೊಲೀಸರು ಕಳೆದ ಒಂದು ವಾರದಿಂದ ಪ್ರಶಾಂತ್‌ನನ್ನು ಕರೆಸಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದರು. ಇದೀಗ ಆರೋಪಿಯನ್ನು ಬಂಧಿಸಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
Kshetra Samachara
01/11/2020 08:19 pm