ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ನಿಷೇಧಿತ M.D.M.A. ಮಾತ್ರೆ, ಬ್ರೌನ್ ಶುಗರ್‌ ಮಾರಾಟ ಯತ್ನ: ಆರೋಪಿ ಬಂಧನ

ಮಣಿಪಾಲ: ಮಣಿಪಾಲದ ಆರ್‌ಟಿಒ ಕಚೇರಿ ರಸ್ತೆಯ ಎಂಡ್ ಪಾಯಿಂಟ್ ಬಳಿ M.D.M.A. ನಿಷೇಧಿತ ಮಾತ್ರೆ ಹಾಗೂ ಬ್ರೌನ್ ಶುಗರ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವ ಸಂದರ್ಭದಲ್ಲಿ ಗುಪ್ತ ಮಾಹಿತಿ ಸಂಗ್ರಹಿಸಿ ಮಣಿಪಾಲ ಪೊಲೀಸರು ದಾಳಿ ಮಾಡಿ ಮಹಮ್ಮದ್ ಘಜಲ್‌ನನ್ನು ಬಂಧಿಸಿದ್ದಾರೆ.

ಆರೋಪಿಯಿಂದ 54 ನಿಷೇಧಿತ MDMA Ecstasy ಮಾತ್ರೆಗಳು, 30 ಗ್ರಾಂ ಬ್ರೌನ್ ಶುಗರ್ ಮತ್ತು 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತುವಿನ ಅಂದಾಜು ಮೌಲ್ಯ 4,62,000 ರೂ.

ದಾಳಿಯನ್ನು ಉಡುಪಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಕೆ ಎಸ್ ಪಿ ಎಸ್ ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕ ಜೈ ಶಂಕರ್ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು.

Edited By :
Kshetra Samachara

Kshetra Samachara

15/10/2020 05:38 pm

Cinque Terre

8.8 K

Cinque Terre

2

ಸಂಬಂಧಿತ ಸುದ್ದಿ