ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 12 ಲಕ್ಷದ ಆಸೆಗೆ ಬಿದ್ದು 26.47 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಉಡುಪಿ: ನಗರದ ವ್ಯಕ್ತಿಯೊಬ್ಬರು ಸ್ಕ್ರಾಚ್ ಕೂಪನ್‌ನಲ್ಲಿ 12 ಲಕ್ಷ ರೂ.ಗಾಗಿ 26.47ಲಕ್ಷ ರೂ. ಕಳೆದುಕೊಂಡು ಮೋಸ ಹೋಗಿದ್ದಾರೆ.

ಕೆ.ನಾಗರಾಜ್ ಭಟ್ ಎಂಬರಿಗೆ ನ್ಯಾಪ್ಟಾಲ್ ಕಂಪನಿಯ ಹೆಸರಿನಲ್ಲಿ ಒಂದು ಸ್ಕ್ರಾಚ್ ಕೂಪನ್ 2019ರ ಮಾರ್ಚ್ 29ರಂದು ಅಂಚೆ ಮೂಲಕ ಬಂದಿತ್ತು. ಅದರಲ್ಲಿ 12 ಲಕ್ಷ ರೂ. ವಿಜೇತರಾಗಿದ್ದೀರಿ ಎಂಬುದಾಗಿ ನಮೂದಿಸಲಾಗಿತ್ತು. ಪತ್ರದಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಹಣ ಪಡೆಯಲು ರಿಜಿಸ್ಟ್ರೇಶನ್ ಚಾರ್ಜ್ 12 ಸಾವಿರ ರೂ. ಪಾವತಿಸುವಂತೆ ತಿಳಿಸಿದ್ದರು. ಇದರಿಂದಾಗಿ ನಾಗರಾಜ್ ಭಟ್‌ ಅವರು ಏಪ್ರಿಲ್ 4ರಂದು ಹಣ ಪಾವತಿಸಿದ್ದರು.

ಕೆಲ ದಿನಗಳ ಬಳಿಕ ಅಮಿತ್ ಬಿಸ್ವಾಸ್ ಹಾಗೂ ಚೇತನ್ ಕುಮಾರ್ ಎಂಬ ಹೆಸರು ಹೇಳಿಕೊಂಡು ಕರೆ ಮಾಡಿ, ಹಣವನ್ನು ಪಡೆಯಲು ಜಿಎಸ್‌ಟಿ, ತೆರಿಗೆ, ವೆರಿಫಿಕೇಶ್ ಚಾರ್ಜ್, ಸಬ್ ಚಾರ್ಜ್ ಪಾವತಿಸುವಂತೆ ತಿಳಿಸಿದ್ದರು. ಅದರಂತೆ ನಾಗರಾಜ್ ಅವರು ಏಪ್ರಿಲ್ 4ರಿಂದ ಜುಲೈ 28ರವರೆಗೆ ಒಟ್ಟು 26,47,650 ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

08/10/2020 06:59 pm

Cinque Terre

20.81 K

Cinque Terre

3

ಸಂಬಂಧಿತ ಸುದ್ದಿ