ಸುಳ್ಳಿನ ಸರಮಾಲೆಯಲ್ಲಿ ಮರೆಯಾಗಿದ್ದ ಸತ್ಯವನ್ನು ಸಿನೆಮಾ ಸಮಾಜದ ಮುಂದೆ ಬಿಚ್ಚಿಟ್ಟಿದೆ. ಸತ್ಯದ ಆವಿಷ್ಕಾರ ಮಾಡಿದ ನಿರ್ದೇಶಕರಿಗೆ ಅಭಿನಂದನೆಗಳು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಪೇಜಾವರ ಶ್ರೀಗಳು ಹಾಗೂ ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀ ಗಳು ಶನಿವಾರ ದಿ ಕಾಶ್ಮೀರಿ ಫೈಲ್ಸ್ ಸಿನೆಮಾವನ್ನು ಜೊತೆಯಾಗಿ ವೀಕ್ಷಿಸಿದ್ದರು.
ಸಿನೆಮಾದಲ್ಲಿ ಅವರು ಕೊಟ್ಟಿರುವ ಎಚ್ಚರ ಸದಾ ಕಾಲ ಜಾಗೃತರಾಗಿರಬೇಕು ಎಂದು ಹೇಳಿದ ಶ್ರೀಗಳು ,ಇದು ಆಗಿ ಹೋದ ವಿಷಯ ಎಂದು ಸುಮ್ಮನಿರುವಂತಿಲ್ಲ. ಮುಂದಿನ ದಿನ ನಮಗೂ ಈ ಪರಿಸ್ಥಿತಿ ಬಾರದಂತೆ ಎಚ್ಚರವಾಗಿರಬೇಕು. ಈ ಸಿನಿಮಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಬರಬೇಕು. ಆ ಕಾಲದಲ್ಲಿ ಪಂಡಿತರು ಉಟ್ಟ ಬಟ್ಟೆಯಲ್ಲಿ ಬದುಕುಳಿದರೆ ಸಾಕೆಂದು ಊರು ಬಿಟ್ಟಿದ್ದರು.ಮತ್ತೆ ಅವರು ಸ್ವಸ್ಥಾನಕ್ಕೆ ಮರಳಬೇಕು. ಹಿಂದಿನ ವೈಭವ ಮತ್ತೆ ಕಾಶ್ಮೀರದಲ್ಲಿ ಕಾಣಬೇಕು ಎಂದು ಶ್ರೀಗಳು ಹೇಳಿದ್ದಾರೆ.
Kshetra Samachara
21/03/2022 11:44 am