ಕಾರ್ಕಳ: ಕಾಡುಕೋಣವೊಂದು ಅಡ್ಡ ಬಂದ ಪರಿಣಾಮ ಬೈಕ್ ಸವಾರನ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿ ಸವಾರ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಮಾಳ ಸಮೀಪ ಸಂಭವಿಸಿದೆ. ಹುಕ್ರಟ್ಟೆ ನಿವಾಸಿ ರೋಹಿತ್ ಮೃತ ದುರ್ದೈವಿ. ಸಹಸವಾರ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೋಹಿತ್ ಹಾಗೂ ಆತನ ಸ್ನೇಹಿತ ಬೈಕ್ ನಲ್ಲಿ ಬಜೆಗೋಳಿಗೆ ಹೋಗುತ್ತಿದ್ದರು.ಕೊಡಂಗೆ ಶಾಲೆ ಬಳಿ ಹೋಗುತ್ತಿದ್ದಾಗ ಕಾಡುಕೋಣವೊಂದು ಇವರ ಬೈಕ್ ಗೆ ಅಡ್ಡ ಬಂದಿದ್ದು, ಕೂಡಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಪಲ್ಟಿಯಾಗಿದೆ ಎನ್ನಲಾಗಿದೆ.ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
Kshetra Samachara
01/06/2022 06:42 pm