ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪಾಂಗಾಳದಲ್ಲಿ ಹಿಟ್ ಆ್ಯಂಡ್ ರನ್; ಪಾದಚಾರಿ ಸಾವು, ಕಾರು ಬೆನ್ನಟ್ಟಿದ ಪೊಲೀಸರು

ಕಾಪು: ಕಾರು ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ

ಪಾಂಗಾಳ ಶಾಲೆಯ ಬಳಿ ಭಾನುವಾರ ಬೆಳಗ್ಗಿನ ಜಾವ ನಡೆದಿದೆ. ಮೃತರನ್ನು ಕೃಷ್ಣ ಪೂಜಾರಿ ಎಂದು ಗುರುತಿಸಲಾಗಿದೆ.

ಬೆಳಗ್ಗಿನ ಜಾವ ಹೆದ್ದಾರಿ ಬದಿಯಲ್ಲಿ ಕಟಪಾಡಿ ಕಡೆಯಿಂದ ಕಾಪು ಕಡೆಗೆ ನಡೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದ್ದು, ಕಾರು ಚಾಲಕ ವಾಹನ ಸಹಿತ ಪರಾರಿಯಾಗಿದ್ದಾನೆ.

ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಕಾಪು ಪೊಲೀಸರು ಕಾರನ್ನು ಬೈಂದೂರು ಭಾಗದಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Edited By : Nirmala Aralikatti
Kshetra Samachara

Kshetra Samachara

03/01/2021 12:19 pm

Cinque Terre

8.41 K

Cinque Terre

0

ಸಂಬಂಧಿತ ಸುದ್ದಿ