ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬೈಕಾಡಿ ಕಾಮೇಶ್ವರ ದೇವಸ್ಥಾನದ ಅರ್ಚಕ, ಜ್ಯೋತಿಷಿ ಗಂಗಾಧರ ಅಡಿಗ ನಿಧನ

ಬ್ರಹ್ಮಾವರ: ಬೈಕಾಡಿ ಕಾಮೇಶ್ವರ ದೇವಸ್ಥಾನದ ಪರ್ಯಾಯ ಅರ್ಚಕರಾದ ಗಂಗಾಧರ ಅಡಿಗ (55) ಇಂದು ಮುಂಜಾನೆ ಬ್ರಹ್ಮಾವರದಲ್ಲಿ ನಿಧನರಾದರು.

ವೈದಿಕ ಮತ್ತು ಜ್ಯೋತಿಷ್ಯ ವೃತ್ತಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಯಕ್ಷಗಾನದ ಅಭಿಮಾನಿ ಹಾಗೂ ಪ್ರೋತ್ಸಾಹಕರಾಗಿದ್ದರು. ಪತ್ನಿ, ಪುತ್ರ ಮತ್ತು ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗದ ಸದಸ್ಯರಾದ ಇವರ ಅಕಾಲಿಕ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

24/09/2020 04:31 pm

Cinque Terre

9.56 K

Cinque Terre

0

ಸಂಬಂಧಿತ ಸುದ್ದಿ