ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕಂದನ ಶವ ಸಾಗಿಸಲು ನೆರವಾದ ಬಿಜೆಪಿ ಯುವ ಘಟಕದ ಅಧ್ಯಕ್ಷ

ತುಮಕೂರು: ಕೂಲಿ ಮಾಡುವ ದಂಪತಿಯ ಮೃತ ಕಂದಮ್ಮನ ಶವ ಸಾಗಿಸಲು ಹಣವಿಲ್ಲದೆ ಪರದಾಡುತ್ತಿದ್ದಾಗ ಬಿಜೆಪಿ ಯುವ ಘಟಕದ ಅಧ್ಯಕ್ಷ ಹನುಮಂತರಾಜು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ದಾವಣಗೆರೆ ಜಿಲ್ಲೆ ಗೋಪನಾಳ್ ಗ್ರಾಮದ ಮಂಜುನಾಥ್ ಮತ್ತು ಗೌರಮ್ಮ ದಂಪತಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ನಾಲ್ಕು ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಗೌರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಸೋಮವಾರ ಮುಂಜಾನೆ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿದೆ. ಮಗುವಿನ ಶವ ತೆಗೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ.

40 ಕಿ.ಮೀ ವ್ಯಾಪ್ತಿಗೆ ಮಾತ್ರವೇ ಸರ್ಕಾರಿ ಆಂಬ್ಯುಲೆನ್ಸ್ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಹೋಗಲು ಹಣವಿಲ್ಲದೆ ಮೃತ ಕಂದನ ಶವವನ್ನು ಹೊತ್ತು ನಗರದ ಬಸ್ ನಿಲ್ದಾಣಕ್ಕೆ ತಂದು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ಬಸ್ ಟಿಕೆಟ್ ತಗಿಸಲು ಕೂಡ ಹಣವಿಲ್ಲದೆ ಕಣ್ಣೀರಿಡುತ್ತಿದ್ದರು. ಕೂಲಿ ಕಾರ್ಮಿಕ ಮಂಜುನಾಥ್ ಅವರ ತಾಯಿಯೂ ಜತೆಯಲ್ಲಿದ್ದರು.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹನುಮಂತರಾಜು, ಮಗುವಿನ ಕುಟುಂಬಸ್ಥರಿಗೆ ಊರಿಗೆ ಹೋಗಲು ಕಾರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

Edited By : Vijay Kumar
Kshetra Samachara

Kshetra Samachara

04/10/2022 01:12 pm

Cinque Terre

5.36 K

Cinque Terre

0