ಮಧುಗಿರಿ : ಮಾಜಿ ಶಾಸಕ ಕೆ.ಎನ್ ರಾಜಣ್ಣನವರು ಮಧುಗಿರಿ ತಾಲೂಕಿನ ಮಿಡಿಗೇಶಿ ಕೊಲೆ ಪ್ರಕರಣಕ್ಕೆ ನನ್ನ ತಮ್ಮ ಪಾತರಾಜು ಕುಮ್ಮಕ್ಕಿದೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಮಾತು, ಅದರಲ್ಲೂ ಏಕ ವಚನದಲ್ಲಿ ಮಾತನಾಡಿ ರುವುದು, ಅವನು ಕ್ರಿಮಿನಲ್ ಅಂತ ಮಾತನಾಡಿ ರುವುದು, ಇವರ ಸಂಸ್ಕಾರ ವನ್ನು ಎತ್ತಿತೋರಿಸುತ್ತದೆ, ಇದು ಶೋಭೆ ತರುವಂತಹ ಮಾತುಗಳ್ಳಲ್ಲ ಎಂದು ಮಧುಗಿರಿ ಶಾಸಕ ಎಂ.ವಿ ವೀರಭದ್ರಯ್ಯ ಶನಿವಾರ ಮಾಧ್ಯಮಕ್ಕೆ ತಿಳಿಸಿದರು.
ನನ್ನ ತಮ್ಮ ಪಾತ ರಾಜು ಎಂತಹ ಸನ್ನಡತೆಯ ವ್ಯಕ್ತಿ ಎನ್ನುವುದನ್ನು ಕೊರಟಗೆರೆ, ಶಿರಾ ಮತ್ತು ತುಮಕೂರಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದು ಎಲ್ಲ ಜನರಿಗೂ ಅವರು ನಡತೆಯ ಬಗ್ಗೆ ತಿಳಿದಿದೆ, ಉತ್ತಮ ಅಧಿಕಾರಿ ಎನ್ನುವುದು ಎಲ್ಲರಿಗೂ ಗೊತ್ತಿದೆ ಆದರೆ ರಾಜಣ್ಣನವರ ಮಾತು ಮತ್ತು ಇವರ ನಡೆ ಅವರ ಮಾತುಗಳಲ್ಲಿ ತಿಳಿಯಬಹುದು ಎಂದು ಕುಟುಕಿದ್ದಾರೆ.
ಈ ಸಂದರ್ಭದಲ್ಲಿ ಹಲವು ಜೆಡಿಎಸ್ ಮುಖಂಡರು ಶಾಸಕರೊಂದಿಗೆ ಇದ್ದರು.
ವರದಿ:- ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಸ್ಟ್ ತುಮಕೂರು
PublicNext
25/09/2022 12:24 pm