108 ಆಂಬ್ಯುಲೆನ್ಸ್ ಸಿಗದೆ ಮಧುಗಿರಿಯಲ್ಲಿ ಮಹಿಳೆ ಸಾವು ಆರೋಪಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಬ್ಯಾಕಪ್ ಸರ್ವರ್ ಅನ್ನು ನಿನ್ನೆ ಸರಿ ಮಾಡಲಾಗಿದೆ. ಹಿಂದಿನಂತೆಯೇ ಸರ್ವರ್ ಕೆಲಸ ಮಾಡುತ್ತಿದೆ. ಕೆಲವೇ ಗಂಟೆಗಳ ಕಾಲ ಸೇವೆಗೆ ಅಡಚಣೆ ಆಗಿತ್ತು. ಸೇವೆ ಮೂರು ಗಂಟೆಗಳಲ್ಲೇ ಪುನರಾರಂಭ ಆಗಿದೆ. ಜಿಲ್ಲಾ ಮಟ್ಟದಲ್ಲೂ ಮ್ಯಾನುಯಲ್ ಬ್ಯಾಕಪ್ ಸರ್ವರ್‌ಗಳ ವ್ಯವಸ್ಥೆ ಮಾಡಲಾಗ್ತಿದೆ. ನಿನ್ನೆ ತುಮಕೂರು ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳು ಹೇಳಿಕೆ ಕೊಟ್ಟಿದ್ದಾರೆ. ಅವರ ಊರಿನಲ್ಲಿ ಆಂಬ್ಯುಲೆನ್ಸ್ ಸಹ ಇತ್ತು. ಆದರೆ ಆಂಬ್ಯುಲೆನ್ಸ್ ಸಿಗದೇ ಆಗಿರುವ ಸಾವು ಅಲ್ಲ ಅದು. ಇದನ್ನು ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಮ್ಮ ಇಲಾಖೆ ನಿರ್ದೇಶಕರಿಗೆ ಅಲ್ಲಿಗೆ ಹೋಗಲು ತಿಳಿಸಿದ್ದೇನೆ. ನಿರ್ದೇಶಕರು ಹೋಗಿಬಂದ ಮೇಲೆ ಸತ್ಯಾಸತ್ಯತೆ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.
PublicNext
26/09/2022 03:27 pm