ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು ಜಿಲ್ಲೆಯಲ್ಲಿ ಹಳಿ ತಪ್ಪಿದ ಆಡಳಿತ ವ್ಯವಸ್ಥೆ - ನ್ಯಾಯಕ್ಕಾಗಿ ಲೋಕಾಯುಕ್ತರ ಮೊರೆ ಹೋದ ನೊಂದ ಜನತೆ

ತುಮಕೂರು: ತುಮಕೂರು ನಗರದಲ್ಲಿ ನಡೆಯುತ್ತಿರುವ ಲೋಕಾಯುಕ್ತ ಕುಂದು ಕೊರತೆ ಸಭೆಯಲ್ಲಿ ಸಲ್ಲಿಕೆಯಾದ ಅರ್ಜಿಗಳು ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಹಳಿತಪ್ಪಿದೆ ಎಂಬುದನ್ನು ಸಾಕ್ಷೀಕರಿಸಿವೆ. ಜಿಲ್ಲೆಯ ಎಲ್ಲಾ ತಾಲ್ಲೂಗಳಿಂದ ಬಂದಿದ್ದ ದೂರುದಾರರಿಂದ ಕಂದಾಯ ಇಲಾಖೆ, ಭೂಮಾಪನಾ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಸಲ್ಲಿಕೆಯಾದವು.

ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಅಧೀನ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದ ಪರಿಣಾಮ ಜಿಲ್ಲೆಯ ನೊಂದ ಜನತೆ ನ್ಯಾಯಕ್ಕಾಗಿ ಲೋಕಾಯುಕ್ತರ ಮುಂದೆ ನಿಲ್ಲುವ ಪರಿಸ್ತಿತಿ ನಿರ್ಮಾಣವಾಗಿದೆ. ಸದಾಕಾಲ ಸಭೆ ನಡೆಸುವುದರಲ್ಲೇ ತಲ್ಲೀನವಾಗುವ ಜಿಲ್ಲಾಧಿಕಾರಿಗಳು, ಜಿಲ್ಲೆಯ ಆಡಳಿತ ವ್ಯವಸ್ಥೆ ಮೇಲೆ ಬಿಗಿ ಹಿಡಿತ ಸಾಧಿಸಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಇಲ್ಲಿಯವರೆಗೂ ಸಮಸ್ಯೆಯ ದೂರು ಅರ್ಜಿ ಹಿಡಿದು ಅಧಿಕಾರಿಗಳ ಕಚೇರಿ ಬಾಗಿಲ ಕಾದು ಸುಸ್ತಾದ ರೈತರು, ಅಮಾಯಕರು, ನೊಂದವರು ನ್ಯಾಯಕ್ಕಾಗಿ ಲೋಕಾಯುಕ್ತರ ಮೊರೆ ಹೋಗಿರುವುದು ಜಿಲ್ಲೆ ಆಡಳಿತ ವ್ಯವಸ್ಥೆ ಅಣಕಿಸುವಂತಿದೆ.

Edited By : Ashok M
PublicNext

PublicNext

19/10/2024 12:32 pm

Cinque Terre

21.61 K

Cinque Terre

0

ಸಂಬಂಧಿತ ಸುದ್ದಿ