ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಸರ್ಕಾರಿ ಗುಂಡುತೋಪು ಕಬಳಿಸಿದ ಶಿರಸ್ತೇದಾರ್ ನರಸಿಂಹರಾಜು ಕುಟುಂಬ - ದೂರು ದಾಖಲು

ತುಮಕೂರು : ಭೂಮಿ ಕೇಂದ್ರದ ಆರ್ ಆರ್ ಟಿ ಶಿರಸ್ತೇದಾರ್ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಹಾಗೂ ಅವರ ಕುಟುಂಬ ಸರ್ಕಾರಿ ಗುಂಡುತೋಪು ನುಂಗಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಾಗಿದೆ.

ತುಮಕೂರು ತಾಲ್ಲೂಕು ಅನುಪನಹಳ್ಳಿ ಗ್ರಾಮದ ಸರ್ವೆ ನಂ 35ರ ಪಿಯಲ್ಲಿದ್ದ 0.24 ಗುಂಟೆ ಹಾಗೂ ಸರ್ವೇ ನಂಬರ್ 24/ಪಿ 9ರಲ್ಲಿದ್ದ 6 ಗುಂಟೆ ಗುಂಡುತೋಪನ್ನು ನರಸಿಂಹರಾಜು ಅವರ ಕುಟುಂಬ ಅಕ್ರಮವಾಗಿ ಕಬಳಿಸಿ ಮಾರಾಟ ಮಾಡಿದ್ದಾರೆ ಎಂದು ದುರ್ಗದಹಳ್ಳಿ ಡಿ.ಪಿ.ತಿಮ್ಮರಾಜು ದೂರು ನೀಡಿದ್ದಾರೆ.

ಅನುಪನಹಳ್ಳಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ನರಸಿಂಹಮೂರ್ತಿ( ನರಸಿಂಹರಾಜು ಅವರ ತಂದೆ) ಅವರು ಹೆಂಡತಿ ಪುಟ್ಟತಾಯಮ್ಮ ಅವರ ಹೆಸರಿಗೆ ಎಂ.ಆರ್.ಸಂಖ್ಯೆ 03/92-92, ಎಲ್.ಆರ್.ಡಿ.ಸಿ.ಆರ್ ಸಂಖ್ಯೆ 275/90-91 ರಂತೆ ನಕಲಿ ದಾಖಲೆ ಸೃಷ್ಟಿ ಕಬಳಿಸಿದ್ದಾರೆ.

ನಂತರ 2005ರಲ್ಲಿ ಪುಟ್ಟತಾಯಮ್ಮ, ವಿಜಯ್ ಕುಮಾರ್, ನರಸಿಂಹರಾಜು ಅವರು 48 ಸಾವಿರ ರೂಪಾಯಿಗೆ ಅನುಪನಹಳ್ಳಿ ಯ ನಾರಾಯಣಪ್ಪ ಅವರಿಗೆ ಮಾರಾಟ ಮಾರಾಟ ಮಾಡಿದ್ದಾರೆ, ಗುಂಡುತೋಪು ಪಕ್ಕದಲ್ಲಿ ಜಮೀನು ಹೊಂದಿರುವ ನಾರಾಯಣಪ್ಪ ಅವರಿಗೆ ಅಕ್ರಮವಾಗಿ ಕಬಳಿಸಿದ್ದ ಗುಂಡುತೋಪನ್ನೆ ಮಾರಾಟ ಮಾಡಿದ್ದಾರೆ.

ಸರ್ಕಾರಿ ಗುಂಡುತೋಪು ಮಾರಾಟ ಮಾಡಿರುವ ಸಂಬಂಧ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ದೂರು ನೀಡಿದ್ದರೂ ಸಹ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರ ವಿರುದ್ದ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ,

Edited By : Abhishek Kamoji
PublicNext

PublicNext

22/10/2024 05:56 pm

Cinque Terre

7.36 K

Cinque Terre

0

ಸಂಬಂಧಿತ ಸುದ್ದಿ