ತುಮಕೂರು: ಪಾವಗಡ ತಾಲೂಕಿನ ರೋಪ್ಪ ಗ್ರಾಮದ ನಾಗೇಂದ್ರ (30) ಮೂರು ವರ್ಷದ ಹಿಂದೆ ಕೊಲೆಯಾಗಿದ್ದು, ಗುರುವಾರ ತಾಲೂಕಿನ ತಿಮ್ಮೇನಾಯಕನ ಪೇಟೆಯ ಬಳಿಯ ಚೆಕ್ ಡ್ಯಾಂ ಹತ್ತಿರ ಮೃತ ವ್ಯಕ್ತಿಯ ಕಳೆಬರಹ ಪತ್ತೆ ಮಾಡಲಾಗಿದೆ. ತಿಮ್ಮೇ ನಾಯಕನ ಪೇಟೆಯ ನಾಗೇಂದ್ರ ಎಂಬ ಯುವಕ ಮೂರು ವರ್ಷದ ಹಿಂದೆ ನಾಪತ್ತೆ ಯಾಗಿದ್ದ. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ನಾಪತ್ತೆಯಾದ ವ್ಯಕ್ತಿ ಹತ್ಯೆಯಾದ ಶಂಕೆ ವ್ಯಕ್ತವಾಗಿ, ಪಾವಗಡ ಠಾಣಾ ಪೊಲೀಸರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆರೋಪಿಗಳು ಹತ್ಯೆ ಮಾಡಿದ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಾದ ಸತೀಶ್ (35), ಅನಿಲ್(30) ಕೆಂಗುರಿ (28) ಶಂಕರ (38) ಸುರೇಶ್(28) ಬಂಧಿಸಿ ಶವವನ್ನು ಹೂತಿಟ್ಟ ಸ್ಥಳದ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದರು. ನಾಗೇಂದ್ರ ಅವರನ್ನು ಕೊಲೆ ಮಾಡಿ ಬಾವಿಗೆ ಎಸೆದಿದ್ದು ಮೃತ ದೇಹ ತೇಳಲಿದ ಹಿನ್ನೆಲೆ, ಮೃತದೇಹವನ್ನು ಸುಟ್ಟು ಹಾಕಿ ಟಿ ಎನ್ ಪೇಟೆ ಹತ್ತಿರವಿರುವ ಚೆಕ್ ಡ್ಯಾಮ್ ಬಳಿ ಹೂತಿಡ ಲಾಗಿದೆ ಎಂದು ತಿಳಿದು ಬಂದಿದೆ.
ಕಳೆದೆರಡು ದಿನಗಳಿಂದ ಮೃತ ದೇಹ ಪತ್ತೆ ಕಾರ್ಯ ಆರಂಭಿಸಿದ್ದು, ಚೆಕ್ ಡ್ಯಾಮ್‌ನಲ್ಲಿ ನೀರಿದ್ದ ಕಾರಣ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ, ಗುರುವಾರ ಚೆಕ್ ಡ್ಯಾಂ ನೀರನ್ನು ಖಾಲಿ ಮಾಡಿ ಮೃತ ದೇಹ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿ, ಮೃತ ದೇಹ ಅಸ್ಥಿ ಪತ್ತೆಹಚ್ಚಲಾಗಿದೆ. ಕಾರ್ಯಾಚರಣೆಯಲ್ಲಿ ಡಿಎಸ್ಪಿ ವೆಂಕಟೇಶ್ ನಾಯ್ಡು, ಸಿಐ ಅಜಯ್ ಸಾರಥಿ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದು, ಆರೋಪಿಗಳನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
PublicNext
30/09/2022 08:12 pm