ತುಮಕೂರು: ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬದ ದಿನದಂದು ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಧಾರ್ಮಿಕ(ಹಸಿರು) ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಗ್ರಾನೈಟ್ ಕೆಲಸ ಮಾಡುವ ರಮೇಶ್(25) ಪೇಟಿಂಗ್ ಕೆಲಸ ಮಾಡುವ ದೇವಿಪ್ರಸಾದ್(19) ಬಂಧಿತ ಆರೋಪಿಗಳು. ಹಬ್ಬದ ದಿನ ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಂತೆ ಶಿರಾ ದರ್ಗಾ ಸರ್ಕಲ್‌ನಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಎಸ್.ಪಿ ರಾಹುಲ್ ಕುಮಾರ್ ಷಹಾಪುರವಾಡ್ ಖುದ್ದು ಸ್ತಳಕ್ಕೆ ತೆರಳಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ಭರವಸೆ ನೀಡಿದ್ದರು.
PublicNext
13/10/2022 05:55 pm