ಮಧುಗಿರಿ ಅಬಕಾರಿ ಇಲಾಖೆಯಿಂದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಮದ್ಯ, ಬಿಯರ್ ಸೇಂದಿ ಇನ್ನು ಮುಂತಾದ ವಸ್ತುಗಳನ್ನು ಪಟ್ಟಣದ ಹೊರವಲಯದಲ್ಲಿರುವ ಪುರಸಭಾ ಕಸ ವಿಲೇವಾರಿ ಘಟಕದಲ್ಲಿ ಮಂಗಳವಾರ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರ ರಾಮಮೂರ್ತಿ ಮಾತನಾಡಿ ವಿವಿಧ ಒಟ್ಟು 32 ಪ್ರಕಾರದಲ್ಲಿ 638 ಲೀಟರ್ ಮದ್ಯ, 78 ಲೀಟರ್ ಬಿಯರ್, 123 ಲೀಟರ್ ಸೇಂದಿ ಹಾಗೂ ಒಂದು ಪ್ಲಾಸ್ಟಿಕ್ ಡ್ರಮ್ ಅನ್ನು ವಶಪಡಿಸಿ ಕೊಳ್ಳಲಾಗಿತ್ತು, ಮರುಬಳಕೆಗೆ ಅವಕಾಶ ಇಲ್ಲದಿರುವುದರಿಂದ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಇಂದು ಪಟ್ಟಣದ ಹೊರವಲಯದಲ್ಲಿರುವ ಪುರಸಭೆ ಕಸ ವಿಲೇವಾರಿ ಘಟಕದಲ್ಲಿ ನಾಶ ಪಡಿಸಿದ್ದೇವೆ ಎಂದು ತಿಳಿಸಿದರು.
ಕೆ.ಎಸ್. ಬಿ.ಸಿ.ಎಲ್ ಡಿಪೋ ಮ್ಯಾನೇಜರ್ ವೀರಾರೆಡ್ಡಿ, ಅಬಕಾರಿ ಉಪನಿರೀಕ್ಷಕರ ಸುರೇಶ ಆರ್, ಗ್ರೇಟ್-2 ತಹಶೀಲ್ದಾರ್ ತಿಪ್ಪೇಸ್ವಾಮಿ, ಇನ್ಸ್ಪೆಕ್ಟರ್ ನಾಗರಾಜು, ಅಬಕಾರಿ ಸಿಬ್ಬಂದಿಗಳು ಇದ್ದರು.
Kshetra Samachara
27/09/2022 07:48 pm