ನವದೆಹಲಿ: ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್ ಹಾಗೂ 1983ರ ವಿಶ್ವಕಪ್ ಚಾಂಪಿಯನ್ ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸ್ಥಾನವನ್ನು ತುಂಬಲಿದ್ದಾರೆ ಎನ್ನಲಾಗುತ್ತಿದೆ.
ಅಕ್ಟೋಬರ್ 18ರಂದು ಸೌರವ್ ಗಂಗೂಲಿ ಅವರ ಅಧಿಕಾರ ಅವಧಿ ಅಂತ್ಯಗೊಳ್ಳಲಿದ್ದು, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 11 ಮತ್ತು 12 ರಂದು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದು. ಅಕ್ಟೋಬರ್ 18 ರಂದು ಮುಂಬೈನಲ್ಲಿ ಚುನಾವಣೆ ನಡೆಯಲಿದೆ. ಈ ಮಧ್ಯೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳು ಸೌರವ್ ಗಂಗೂಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದ್ದಾರೆ.
'ಕರ್ಮ ಯಾರನ್ನೂ ಬಿಡಲ್ಲ' ಎಂದು ಕೆಲ ನೆಟ್ಟಿಗರು ಟ್ವೀಟ್ ಮಾಡಿ ಸೌರವ್ ಗಂಗೂಲಿ ಅವರನ್ನು ಕುಟುಕಿದ್ದಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾ ಏಕದಿನ ತಂಡ ನಾಯಕರಾಗಿ ಮುಂದುರಿಸಲು ಬಯಸಿದ್ದರು. ಆದರೆ ನೀವು ಅದನ್ನು ಕಿತ್ತುಕೊಂಡ್ರಿ, ಈಗ ನೀವು ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಸಲು ಬಯಸಿದ್ದರೂ ಆ ಹುದ್ದೆ ನಿಮಗೆ ಸಿಗಲಿಲ್ಲ. ಇದೇ ನಿಮ್ಮ ಕರ್ಮದ ಫಲ ಎಂದು ಕೆಲ ನೆಟ್ಟಿಗರು ದಾದಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
PublicNext
12/10/2022 05:38 pm