ಬೆಂಗಳೂರು : ಸೆ.5 ರಿಂದ ಆರಂಭವಾಗಲಿರುವ ಫಿಬಾ ಅಂಡರ್-18 ಮಹಿಳಾ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್ ಶಿಪ್‌ಗೆ ಎಲ್ಲಾ ಸಿದ್ದತೆ ನಡೆಸಲಾಗುತ್ತಿದೆ.
ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನಡೆಯಲಿದೆ. ಭಾರತ, ಜಪಾನ್, ಚೀನಾ, ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಒಟ್ಟು 16 ತಂಡಗಳು ಭಾಗಿಯಾಗಲಿವೆ.
ಈ ಕ್ರೀಡಾಕೂಟದಲ್ಲಿ ವಿಜೇತರಾದ ಮೊದಲ 4 ತಂಡಗಳು 2023ರ ಜುಲೈನಲ್ಲಿ ಸ್ಪೈನ್‌ನಲ್ಲಿ ನಡೆಯಲಿರುವ ಅಂಡರ್-19 ಮಹಿಳೆಯರ ಫಿಬಾ ವಿಶ್ವ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ.
ಈ ಏಷ್ಯನ್ ಬಾಸ್ಕೇಟ್ ಬಾಲ್ ಚಾಂಪಿಯನ್ ಶಿಪ್'ಗೆ ಕ್ರೀಡಾ ಇಲಾಖೆಯಿಂದ 1.60 ಕೋಟಿ ಅನುದಾನ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಮಾತನಾಡಿ, ಈ ಕ್ರೀಡಾಕೂಟಕ್ಕೆ ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 1.60 ಕೋಟಿ ಅನುದಾನ ನೀಡಿದೆ. 77 ಲಕ್ಷ ವೆಚ್ಚದಲ್ಲಿ ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ 8.96 ಕೋಟಿ ವೆಚ್ಚದಲ್ಲಿ ಕೋರಮಂಗಲ ಒಳಾಂಗಣ ಕ್ರೀಡಾಂಗಣ ನವೀಕರಣಗೊಳಿಸಿ ಟೂರ್ನಿಗೆ ಸಜ್ಜುಗೊಳಿಸಲಾಗಿದೆ.
PublicNext
03/09/2022 01:04 pm