ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs PAK: ಹೈವೋಲ್ಟೇಜ್ ಪಂದ್ಯದ ಕೊನೆಯ ಓವರ್​ ಹೇಗಿತ್ತು?

ದುಬೈ: ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬದ್ಧವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ. ಅದರಲ್ಲೂ ಕೊನೆಯ ಎರಡು ಓವರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರಿಸಿ ಗೆಲುವು ತಂದುಕೊಟ್ಟಿದ್ದನ್ನು ನೆನೆಯಲೇಬೇಕು.

ಹೌದು. ಭಾರತದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 3 ಬೌಂಡರಿ ಸಹಿತ 13 ರನ್‌ ಗಳಿಸಿದರು. ಇದರಿಂದಾಗಿ ಕೊನೆಯ 20ನೇ ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 7 ರನ್​ಗಳ ಅವಶ್ಯಕತೆಯಿತ್ತು. ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕ್ರೀಸ್​ನಲ್ಲಿದ್ದರು. ಬಾಬರ್ ಲೆಗ್ ಸ್ಪಿನ್ನರ್ ಮೊಹಮ್ಮದ್ ನವಾಜ್​ಗೆ ಬೌಲಿಂಗ್ ನೀಡಿದರು. ಆದರೆ ಅಚ್ಚರಿ ಎಂಬಂತೆ ಜಡೇಜಾ ಅವರು ನವಾಜ್​ರ ಮೊದಲ ಎಸೆದಲ್ಲೇ ಕ್ಲೀನ್ ಬೌಲ್ಡ್ ಆದರು. ಈ ಮೂಲಕ 29 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿದ್ದ ಜಡ್ಡು 35 ರನ್​ಗೆ ಔಟಾದರು. ಈ ಸಂದರ್ಭ ಕ್ರೀಸ್​ಗೆ ಬಂದ ದಿನೇಶ್ ಕಾರ್ತಿಕ್ ಎರಡನೇ ಎಸೆತದಲ್ಲಿ 1 ರನ್ ಕಲೆಹಾಕಲಷ್ಟೆ ಸಾಧ್ಯವಾಯಿತು. ಹೀಗಾಗಿ 4 ಎಸೆತಗಲ್ಲಿ 6 ರನ್ ಬೇಕಾಗಿತ್ತು.

ಮೂರನೇ ಎಸೆತ ಹಾರ್ದಿಕ್ ಪಾಂಡ್ಯ ಕಡೆಯಿಂದ ಡಾಟ್ ಆಯಿತು. ಆಗ ಪಂದ್ಯದ ಕಾವು ಮತ್ತಷ್ಟು ಹೆಚ್ಚಿತು. ಒಂದು ದೊಡ್ಡ ಹೊಡೆತ ಭಾರತಕ್ಕೆ ಅತಿ ಮುಖ್ಯವಾಗಿತ್ತು. ಆದರೆ ಈ ಒತ್ತಡವನ್ನು ಹಾರ್ದಿಕ್ ಅಚ್ಚುಕಟ್ಟಾಗಿ ನಿರ್ವಹಿಸಿದರು. 4ನೇ ಎಸೆತದ ಕ್ವಿಕ್ ಶಾರ್ಟ್ ಬಾಲ್ ಅನ್ನು ಚೆನ್ನಾಗಿ ಅರಿತ ಪಾಂಡ್ಯ ಲಾಂಗ್​ಆನ್​ನಲ್ಲಿ ಫ್ಲಾಟ್ ಸಿಕ್ಸ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್​ಗಳ ಗೆಲುವು ಕಂಡಿತು. ಈ ಅಮೋಘ ಪ್ರದರ್ಶನಕ್ಕಾಗಿ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.

Edited By : Vijay Kumar
PublicNext

PublicNext

29/08/2022 12:00 pm

Cinque Terre

48.47 K

Cinque Terre

1