ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Asia Cup: SL vs AFG; ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಅಫ್ಘಾನಿಸ್ಥಾನ

ದುಬೈ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ಥಾನ ತಂಡದ ನಾಯಕ ಮೊಹಮ್ಮದ್ ನಬಿ ಬೌಲಿಂಗ್ ಆಯ್ದುಕೊಂಡಿದ್ದಾರೆ.

ಏಷ್ಯಾ ಕಪ್ 2022ರ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ಥಾನ ಮುಖಾಮುಖಿಯಾಗಿವೆ. ಶ್ರೀಲಂಕಾ 5 ಸಲ ಏಷ್ಯಾ ಕಪ್‌ ಎತ್ತಿದ್ದು, ದ್ವಿತೀಯ ಸ್ಥಾನದಲ್ಲಿದೆ. ಕ್ರಿಸ್ ಸಿಲ್ವರ್‌ವುಡ್‌ ಈ ತಂಡದ ನೂತನ ಕೋಚ್ ಆಗಿದ್ದಾರೆ. ಆದರೆ ಸ್ಟಾರ್‌ ಆಟಗಾರರ ಕೊರತೆ ಇದೆ. ಸ್ಥಿರ ಪ್ರದರ್ಶನ ನೀಡುವಲ್ಲೂ ತಂಡ ಹಿಂದುಳಿದಿದೆ.

ಶ್ರೀಲಂಕಾಗೆ ಹೋಲಿಸಿದರೆ ಅಫ್ಘಾನಿಸ್ಥಾನ ತಂಡದಲ್ಲೇ ಹೆಚ್ಚಿನ ವೈವಿಧ್ಯವನ್ನು ಕಾಣಬಹುದು. ಮೊಹಮ್ಮದ್ ನಬಿ ಪಡೆ ಅಗ್ರ ರ್‍ಯಾಂಕಿಂಗ್‌ ತಂಡಗಳನ್ನು ಮಣಿಸುವ ಯೋಜನೆಯಲ್ಲಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದ ಅಫ್ಘಾನ್ ಪಡೆ, ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಹವಣಿಸುತ್ತಿದೆ. ಎಂದಿನಂತೆ ವಿಶ್ವ ದರ್ಜೆಯ ಸ್ಪಿನ್ನರ್‌ ರಶೀದ್‌ ಖಾನ್‌ ಟ್ರಂಪ್‌ಕಾರ್ಡ್‌ ಆಗಿದ್ದಾರೆ.

Edited By : Vijay Kumar
PublicNext

PublicNext

27/08/2022 07:21 pm

Cinque Terre

56.8 K

Cinque Terre

0

ಸಂಬಂಧಿತ ಸುದ್ದಿ