ಗದಗ : ರಾಯಲ್ ಕಿಂಗ್ ರಿಯಲ್ ಸ್ಟಾರ್ ಸವಿ ನೆನಪಿಗಾಗಿ ಹಾಗೂ ಮೊಹರಂ ಹಬ್ಬದ ಪ್ರಯುಕ್ತವಾಗಿ ಜಿದ್ದಾಜಿದ್ದಿನ ಟಗರಿನ ಕಾಳಗವನ್ನು ಗದಗ ತಾಲೂಕಿನ ಬೆಳಹೋಡ ಗ್ರಾಮದಲ್ಲಿ ನಡೆಸಲಾಯಿತು.
ಬೆಳಹೋಡ ಗ್ರಾಮದ ಶ್ರೀ ಪುರದಪ್ಪ ವೀರಪ್ಪ ಹೊಸಹಳ್ಳಿ ಪ್ರೌಢಶಾಲಾ ಆವರಣದಲ್ಲಿ ನಡೆಸಲಾಯಿತು. ಹಾಲು ಹಲ್ಲಿನ ಟಗರಿನ ಕಾಳಗದ ಸ್ಪರ್ಧೆಗೆ ಗ್ರಾಮ ಪಂಚಾಯತ ಅಧ್ಯಕ್ಷ ದಾವಲಸಾಬ್ ಹಿತ್ತಲಮನಿ ಅವರು ಚಾಲನೆ ನೀಡಿದ್ದರು.
ಇನ್ನು ಕಾಳಗದಲ್ಲಿ ಟಗರುಗಳ ಗುದ್ದಾಟ ನೋಡಲು ನೂರಾರು ಜನ ಸೇರಿದ್ರು. ಬೆಳಹೋಡ ಗ್ರಾಮದ ಅಕ್ಕ ಪಕ್ಕದ ಗ್ರಾಮಸ್ಥರು ಆಗಮಿಸಿ ಟಗರಿನ ಕಾಳಗ ನೋಡಿ ಸಿಳ್ಳೆ, ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ವಿಜೇತವಾದ ಟಗರುಗಳಿಗೆ ಪ್ರಥಮ ಬಹುಮಾನವಾಗಿ 5001,ದ್ವಿತೀಯ 4001 , ತೃತೀಯ 3001 ರೂಪಾಯಿ ಬಹುಮಾನ ಜೊತೆಗೆ ಸಿಲ್ಡ್ ಸಹ ನೀಡಲಾಯಿತು.
PublicNext
08/08/2022 05:08 pm