ಸೇಂಟ್ ಕಿಟ್ಸ್‌ನಲ್ಲಿ ಮೂರನೇ ವೆಸ್ಟ್ ಇಂಡೀಸ್-ಭಾರತ T20I ಇಂದು ರಾತ್ರಿ 8 ಗಂಟೆಗೆ ಬದಲಾಗಿ 9.30 ಗಂಟೆಗೆ (ಭಾರತದ ಕಾಲಮಾನದ ಪ್ರಕಾರ) ಆರಂಭವಾಗಲಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಮಾಹಿತಿ ನೀಡಿದೆ.
"ಆಟಗಾರರ ಕಿಟ್ಸ್ ತರುವಲ್ಲಿ ವಿಳಂಬವಾದ ಕಾರಣ 2ನೇ ಟಿ20 ಪಂದ್ಯವು ಮೂರು ಗಂಟೆಗಳ ಕಾಲ ತಡವಾಗಿ ಆರಂಭವಾಯಿತು. ಇದರಿಂದಾಗಿ ಆಟಗಾರರಿಗೆ ಸಾಕಷ್ಟು ವಿಶ್ರಾಂತಿಗಾಗಿ ಮತ್ತು ಸೇಂಟ್ ಕಿಟ್ಸ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಪಂದ್ಯಗಳಿಗೆ ಚೇತರಿಕೆಯ ಸಮಯವನ್ನು ಖಚಿತಪಡಿಸಿಕೊಳ್ಳಲು ತಂಡಗಳು ನಂತರದ ಸಮಯದಲ್ಲಿ ಮೂರನೇ T20 ಪಂದ್ಯವನ್ನು ತಡವಾಗಿ ಪ್ರಾರಂಭಿಸಲು ಒಪ್ಪಿಕೊಂಡಿವೆ" ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತಿಳಿಸಿದೆ.
PublicNext
02/08/2022 11:05 am