ಬರ್ಮಿಂಗ್‌ಹ್ಯಾಮ್: ಭಾರತ ಮಹಿಳಾ ಹಾಕಿ ತಂಡವು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗೆಲುವಿನ ನಗೆ ಬೀರಿದೆ. ಇಂದು ಘಾನಾ ವಿರುದ್ಧ ನಡೆದ ಪಂದ್ಯದಲ್ಲಿ 5-0 ಅಂತರರಿಂದ ಗೆಲುವು ದಾಖಲಿಸಿದೆ.
ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಮಹಿಳಾ ಹಾಕಿ ತಂಡವು ಗೆಲುವಿನ ಅಭಿಯಾನವನ್ನು ಪೂಲ್ A ಪಂದ್ಯದಲ್ಲಿ ಘಾನಾ ವಿರುದ್ಧ 5-0 ಗೆಲುವಿನೊಂದಿಗೆ ಪ್ರಾರಂಭಿಸಿತು. ಭಾರತದ ಪರ ಗುರ್ಜಿತ್ ಕೌರ್ ಎರಡು ಗೋಲು ಗಳಿಸಿದರೆ, ಸಂಗೀತಾ ಕುಮಾರಿ, ಸಲಿಮಾ ಟೆಟೆ ಮತ್ತು ನೇಹಾ ಗೋಯಲ್ ತಲಾ ಒಂದು ಗೋಲು ಗಳಿಸಿದರು. ಈ ಪಂದ್ಯದಲ್ಲಿ ಭಾರತವು ಶೇ.52ರಷ್ಟು ಹಿಡಿತ ಹೊಂದಿತ್ತು. ಭಾರತವು ಶನಿವಾರ ವೇಲ್ಸ್ ತಂಡವನ್ನು ಎದುರಿಸಲಿದೆ.
PublicNext
29/07/2022 09:16 pm