ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2022ರ ಕಾಮನ್‌ವೆಲ್ತ್ ಗೇಮ್ಸ್‌: ಪಾಕ್‌ನ ಸುಲೇಮಾನ್‌ಗೆ ಸೋಲುಣಿಸಿದ ಭಾರತದ ಬಾಕ್ಸರ್ ಶಿವ ಥಾಪಾ

ಬರ್ಮಿಂಗ್‌ಹ್ಯಾಮ್‌: ಬರ್ಮಿಂಗ್‌ಹ್ಯಾಮ್‌ನಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಇಂದಿನಿಂದ ಆರಂಭವಾಗಿದ್ದು, ಭಾರತದ ಬಾಕ್ಸರ್ ಶಿವ ಥಾಪಾ ಶುಭಾರಂಭ ಮಾಡಿದ್ದಾರೆ.

ಭಾರತದ 28 ವರ್ಷದ ಬಾಕ್ಸರ್ ಶಿವ ಥಾಪಾ ಶುಕ್ರವಾರ ನಡೆದ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 60 ಕೆಜಿ- 63.5 ಕೆಜಿ (ಲೈಟ್ ವೆಲ್ಟರ್‌ವೇಟ್) ವಿಭಾಗದ 32ರ ಸುತ್ತಿನಲ್ಲಿ ಪಾಕಿಸ್ತಾನದ ಸುಲೇಮಾನ್ ಬಲೋಚ್ ಅವರನ್ನು ಸೋಲಿಸಿದ್ದಾರೆ.

ಇದು 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮೊದಲ ಬಾಕ್ಸಿಂಗ್ ಪಂದ್ಯವಾಗಿತ್ತು. ಥಾಪಾ ಪಂದ್ಯವನ್ನು 5-0 ಪಾಯಿಂಟ್‌ಗಳಿಂದ ಗೆದ್ದು ಬೀಗಿದರು. ಥಾಪಾ ಅವರು ಭಾನುವಾರ ನಡೆಯಲಿರುವ 16ರ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ ರೀಸ್ ಲಿಂಚ್ ಅವರನ್ನು ಎದುರಿಸಲಿದ್ದಾರೆ.

Edited By : Vijay Kumar
PublicNext

PublicNext

29/07/2022 06:13 pm

Cinque Terre

25.22 K

Cinque Terre

0