ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯವೊಂದರಲ್ಲಿ ನಡೆದ ಮಂಕಡ್ ರನೌಟ್ ಭಾರೀ ವೈರಲ್ ಆಗುತ್ತಿದೆ. ರನೌಟ್ ಆದ ಎನ್. ಜಗದೀಶನ್ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ ವರ್ತನೆ ನೋಡಿದ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಚೆಪಾಕ್ ಸೂಪರ್ ಗಿಲ್ಲಿಸ್ ಹಾಗೂ ನೆಲೈ ರಾಯಲ್ ಕಿಂಗ್ಸ್ ನಡುವಣ ಟಿಎನ್ಪಿಎಲ್ನ ಮೊದಲ ಪಂದ್ಯದಲ್ಲಿ, ಚೆಪಾಕ್ ತಂಡದ ಬ್ಯಾಟ್ಸ್ಮನ್ ಎನ್. ಜಗದೀಶನ್ ಅವರನ್ನು ಬೌಲರ್ ಬಾಬ ಅಪರಂಜಿತ್ ಮಂಕಡ್ ರನೌಟ್ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಈ ಘಟನೆಯಿಂದ ಸಿಟ್ಟಾದ ಜಗದೀಶನ್ ಮಧ್ಯ ಬೆರಳನ್ನು ತೋರಿಸುತ್ತಾ ಪೆವಿಲಿಯನ್ ಕಡೆ ನಡೆದರು. 2-3 ಬಾರಿ ಈ ರೀತಿ ಸನ್ನೆ ಮಾಡಿದ್ದು, ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಇದಕ್ಕೆ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಒಬ್ಬ ಹಿರಿಯ ಆಟಗಾರ ಕ್ರೀಡಾಂಗಣದಲ್ಲಿ ಈ ರೀತಿ ವರ್ತಿಸಿದ್ದು ಸರಿಯಲ್ಲ. ಈ ರೀತಿ ಕೆಟ್ಟದಾಗಿ ಸನ್ನೆ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಇನ್ನು ಕೆಲವರು ತಿಳಿಸಿದ್ದಾರೆ.
ಜಗದೀಸನ್ 25(15) ರನ್ ಗಳಿಸಿದ್ದಾಗ ನಾನ್ ಸ್ಟ್ರೈಕರ್ ಅಂತ್ಯದಲ್ಲಿ ಅಪರಾಜಿತ್ ಅವರಿಂದ ರನೌಟ್ ಆದರು. ಈ ವರ್ಷದ ಆರಂಭದಲ್ಲಿ, MCC ಕಾನೂನು 41 (ಅನ್‌ಫೇರ್ ಪ್ಲೇ)ನಿಂದ ಕಾನೂನು 38 (ರನ್-ಔಟ್)ಗೆ 'ಮಂಕಾಡಿಂಗ್' ಅನ್ನು ಬದಲಾಯಿಸಿತು.
PublicNext
24/06/2022 03:40 pm