ನವದೆಹಲಿ: ಮುಂದಿನ ವರ್ಷದ ಐಪಿಎಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಲಿದ್ದೇನೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.
ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2022 ಟೂರ್ನಿ ಮುಕ್ತಾಯ ಹಂತಕ್ಕೆ ಬಂದಿದೆ. ಪ್ಲೇ ಆಫ್ಗೆ ಪ್ರವೇಶಿಸಿರುವ ಆರ್‌ಸಿಬಿ ನಾಳೆ (ಮೇ 25)ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಈ ನಡುವೆ ಆರ್‌ಸಿಬಿ ತಂಡದ ಆಪದ್ಬಾಂಧವ ಎಬಿ ಡಿವಿಲಿಯರ್ಸ್ ಮತ್ತೆ ಐಪಿಎಲ್‌ಗೆ ವಾಪಸ್ ಆಗುವುದಾಗಿ ಹೇಳಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.
ಈ ಸಂಬಂಧ ಮಾತಾಡಿದ ಎಬಿ ಡಿವಿಲಿಯರ್ಸ್, 'ನಾನು ಮುಂದಿನ ವರ್ಷ ಐಪಿಎಲ್ ವೇಳೆ ಆರ್ಸಿಬಿಗೆ ವಾಪಸ್ ಆಗಲಿದ್ದೇನೆ. ಈ ವಿಚಾರ ವಿರಾಟ್ ಕೊಹ್ಲಿ ಖಚಿತಪಡಿಸಿರುವುದು ಖುಷಿ ತಂದಿದೆ. ನನ್ನ ಎರಡನೇ ತವರು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
PublicNext
24/05/2022 05:04 pm