ಬೆಂಗಳೂರು: ಕನ್ನಡದ ಗಾಲ್ಫ್ ತಾರೆ ಅದಿತಿ ಅಶೋಕ್ ಕೆಂಡಾಮಂಡಲ ಆಗಿದ್ದಾರೆ. ಫ್ರಾನ್ಸ್ ಏರ್‌ಲೈನ್ಸ್ ವಿರುದ್ಧ ತಮ್ಮ ಗಾಲ್ಫ್ ಕಿಟ್ ಕಾಣೆ ಆಗಿರೋ ಬಗ್ಗೆ ಸಿಟ್ಟಾಗಿದ್ದಾರೆ.
ಪ್ರಯಾಣದ ವೇಳೆ ನನ್ನ ಗಾಲ್ಫ್ ಕಿಟ್ ಕಾಣೆ ಆಗಿದೆ. ಮುಂಬರೋ ಪಂದ್ಯಕ್ಕೆ ಗಾಲ್ಫ್ ಕಿಟ್ ಅಗತ್ಯ ಇದೆ. ತುರ್ತಾಗಿಯೇ ಪ್ರತಿಕ್ರಿಯೆ ನೀಡಿ ಅಂತಲೇ ಟ್ವಿಟರ್ ಮೂಲಕ ಅದಿತಿ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ಯಾರಿಸ್ ನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಲ್ಲಿಯೇ ಅದಿತಿ ಅಶೋಕ್ ಗಾಲ್ಫ್ ಕಿಟ್ ಕಳೆದು ಹೋಗಿದೆ. ಈ ಹಿನ್ನೆಲೆಯಲ್ಲಿಯೇ ವಿಮಾನಯಾನ ಸಂಸ್ಥೆ ಈ ಕೂಡಲೇ ಕಾರ್ಯಪ್ರವೃತ್ತರಾಗೋವಂತೆನೂ ಅದಿತಿ ಅಶೋಕ್ ಕೋರಿದ್ದಾರೆ.
PublicNext
23/05/2022 05:19 pm