ಮುಂಬೈ: ಶುಭ್ಮನ್ ಗಿಲ್ ಏಕಾಂಗಿ ಹೋರಾಟದ ಅರ್ಧಶತಕದ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 145 ರನ್‌ಗಳ ಸವಾಲು ಒಡ್ಡಿದೆ.
ಪುಣೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್ 2022ರ ಭಾಗವಾಗಿ ನಡೆಯುತ್ತಿರುವ 57ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದೆ.
ಗುಜರಾತ್ ತಂಡದ ಪರ ಶುಭ್ಮನ್ ಗಿಲ್ ಅಜೇಯ 63 ರನ್, ಡೇವಿಡ್ ಮಿಲ್ಲರ್ 26 ರನ್, ರಾಹುಲ್ ತೇವಾಟಿಯ 22 ರನ್ ಗಳಿಸಿದರು. ಇನ್ನು ಲಕ್ನೋ ಪರ ಆವೇಶ್ ಖಾನ್ 2 ವಿಕೆಟ್ ಕಿತ್ತರೆ, ಮೊಹ್ಸಿನ್ ಖಾನ್ ಹಾಗೂ ಜೇಸನ್ ಹೋಲ್ಡರ್ ತಲಾ 1 ವಿಕೆಟ್ ಪಡೆದುಕೊಂಡರು.
PublicNext
10/05/2022 09:23 pm