ವೋರ್ಸೆಸ್ಟರ್: ಇಂಗ್ಲೆಂಡ್ ತಂಡದ ಟೆಸ್ಟ್ ಪಂದ್ಯದ ನಾಯಕ ಬೆನ್ ಸ್ಟೋಕ್ಸ್ ಒಂದೇ ಓವರ್ ನಲ್ಲಿ 5 ಸಿಕ್ಸ್ ಹಾಗೂ ಒಂದು ಬೌಂಡರಿ ಬಾರಿಸೋ ಮೂಲಕ ಕೌಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಹೊಸ ದಾಖಲೆ ಮಾಡಿದ್ದಾರೆ.
ಟೆಸ್ಟ್ ತಂಡದ ನಾಯಕನಾಗಿ ನೇಮಗೊಂಡ ಮೊದಲ ಪಂದ್ಯದಲ್ಲಿಯೇ ಬೆನ್ ಸ್ಟೋಕ್ಸ್ ಈ ಒಂದು ದಾಖಲೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಕೌಂಟಿ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಬೆನ್ ಸ್ಟೋಕ್ಸ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನೆ ಮಾಡಿದ್ದಾರೆ. ದಿನದ ಮೂರನೇ ಓವರ್‌ಗೆ ಮೈದಾನಕ್ಕಿಳದ ಬೆನ್, ಮೊದಲ ಒಂದೂವರೆ ಗಂಟೆಯಲ್ಲಿಯೆ ಭಾರೀ ಬ್ಯಾಟಿಂಗ್ ಮಾಡಿದರು. ಕೇವಲ 74 ಎಸೆತಗಳಲ್ಲಿ 131 ರನ್ ಸಿಡಿಸಿದರು. ಕ್ರಿಕೆಟ್ ಕೌಂಟಿಯಲ್ಲಿ ಡಹರ್ಮ್ ತಂಡದ ಪರ ಅತಿವೇಗದಲ್ಲಿ ಶತಕ ಬಾರಿಸಿದ ಬ್ಯಾಟರ್ ಅನ್ನೋ ಕೀರ್ತಿಗೂ ಪಾತ್ರರಾಗಿದ್ದಾರೆ.
ವೋರ್ಸೆಸ್ಟರ್‌ಶೈರ್ ವಿರುದ್ಧ ಕೌಂಟಿ ಪಂದ್ಯದಲ್ಲಿ ಡಹರ್ಮನ್ ಸ್ಟೋಕ್ಸ್ 88 ಎಸೆತದಲ್ಲಿ 161 ರನ್ ಬಾರಿಸಿದರು. ಇವರ ಇನ್ನಿಂಗ್ಸ್ ನಲ್ಲಿ 8 ಬೌಂಡರಿ 17 ಸಿಕ್ಸರ್‌ಗಳಿದ್ದವು. ಡರ್ಹಮ್ 6 ವಿಕೆಟ್ ಕಳೆದುಕೊಂಡು 580 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೆರ್ ಮಾಡಿಕೊಂಡಿದೆ.
PublicNext
07/05/2022 12:17 pm