ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹಾಗೆ ಬೆದರಿಕೆಯೊಡ್ಡಿದ ಪತ್ರಕರ್ತ ಮಜುಂದಾರ್‌ಗೆ 2 ವರ್ಷ ನಿಷೇಧ

ಮುಂಬೈ: ಟೀಂ ಇಂಡಿಯಾದ ವಿಕೆಟ್‌ ಕೀಪರ್ ವೃದ್ಧಿಮಾನ್ ಸಾಹಾಗೆ ಬೆದರಿಕೆಯೊಡ್ಡಿದ ಪತ್ರಕರ್ತ ಬೋರಿಯಾ ಮಜುಂದಾರ್ ಅವರಿಗೆ ಬಿಸಿಸಿಐ ಎರಡು ವರ್ಷಗಳ ನಿಷೇಧ ಹೇರಿದೆ.

ಖ್ಯಾತ ಕ್ರೀಡಾ ಪತ್ರಕರ್ತರಾಗಿರುವ ಬೋರಿಯಾ ಮಜುಂದಾರ್​​ ಅವರಿನ್ನು 2 ವರ್ಷಗಳ ಕಾಲ ಕ್ರಿಕೆಟ್‌ ವರದಿಗಾರಿಕೆ ಮಾಡುವಂತಿಲ್ಲ. ಹಾಗೆಯೇ ಯಾವುದೇ ಭಾರತೀಯ ಕ್ರಿಕೆಟಿಗರನ್ನು ಸಂದರ್ಶಿಸುವಂತಿಲ್ಲ. ಅಷ್ಟೇ ಅಲ್ಲದೆ ಬಿಸಿಸಿಐ ಸದಸ್ಯ ಅಥವಾ ರಾಜ್ಯ ಕ್ರಿಕೆಟ್‌ ಮಂಡಳಿಗಳ ಅಧಿಕಾರಿಗಳೊಂದಿಗೆ ಸಂವಹನವನ್ನೂ ನಡೆಸುವಂತಿಲ್ಲ ಎಂಬ ನಿಷೇಧ ಹೇರಲಾಗಿದೆ.

ಸಂದರ್ಶನ ನೀಡದ ಕಾರಣಕ್ಕಾಗಿ ಸಾಹಾಗೆ ಮಜುಂದಾರ್​​ ಬೆದರಿಕೆಯೊಡ್ಡಿದ್ದರು. ಇದರ ತನಿಖೆಗಾಗಿ ಬಿಸಿಸಿಐ ಫೆಬ್ರವರಿ 25ರಂದು ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿತ್ತು. ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಖಜಾಂಚಿ ಅರುಣ್‌ ಸಿಂಗ್‌ ಧುಮಾಲ್ ಮತ್ತು ಕೌನ್ಸಿಲರ್ ಪ್ರಭ್‌ತೇಜ್‌ ಸಿಂಗ್‌ ಭಾಟಿಯಾ ಈ ಸಮಿತಿಯ ಸದಸ್ಯರಾಗಿದ್ದರು. ಸಮಿತಿಯು ಮಜುಂದಾರ್​​ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಫೆ. 23ರಂದು ಸಾಹಾ ಟ್ವೀಟ್ ಮೂಲಕ ಪತ್ರಕರ್ತನಿಂದ ತನಗಾದ ತೊಂದರೆಯನ್ನು ಹೇಳಿಕೊಂಡಿದ್ದರು. ಆದರೆ ಆ ಪತ್ರಕರ್ತನ ಹೆಸರನ್ನು ಬಹಿರಂಗಗೊಳಿಸಿರಲಿಲ್ಲ. ವಿಚಾರಣೆ ವೇಳೆ ಬೋರಿಯಾ ಮಜುಂದಾರ್​​ ಹೆಸರು ಹೊರಬಿತ್ತು.

Edited By : Vijay Kumar
PublicNext

PublicNext

05/05/2022 07:11 am

Cinque Terre

22.21 K

Cinque Terre

2

ಸಂಬಂಧಿತ ಸುದ್ದಿ