ಕ್ರಿಕೆಟ್ ಜಗತ್ತಿನಲ್ಲಿ ಐಪಿಲ್ ಒಂದು ರೀತಿ ಚಿನ್ನದ ಮೊಟ್ಟೆ ಇಡೋ ಪಂದ್ಯವೇ ಬಿಡಿ. ಕ್ರಿಕೆಟ್ ಜಗತ್ತಿನಲ್ಲಿ ಮಿಂಚಬೇಕು ಅನ್ನೋರಿಗೆ ಇದು ಚಿನ್ನದ ಹುಂಡಿನೂ ಆಗಿದೆ. ಅದ್ಹೇಗೆ ಅಂತ ಹೇಳ್ತೀವಿ ನೋಡಿ.
ಕ್ರಿಕೆಟ್ ಆಟದಲ್ಲೂ ಪ್ರತಿಭೆ ಅನ್ನೋದು ಬೇಕೆ ಬೇಕು. ಆದರೆ, ಅದು ಎಲ್ಲರಿಗೂ ಸಾಧ್ಯ ಆಗೊದಿಲ್ಲ. ಸಾಧ್ಯ ಆಗಿರೋರಿಗೆ ಅವಕಾಶಗಳ ಕೊರತೆ ಇರುತ್ತದೆ. ಆರ್ಥಿಕ ಬೆಂಬಲ ಕೂಡ ಇರೋದಿಲ್ಲ. ಐಪಿಎಲ್ ಅಂತಹ ಪ್ರತಿಭಾನ್ವಿತ ಆಟಗಾರರಿಗೆ ವೇದಿಕೆ ಆಗಿದೆ.
ಹೌದು.ಕೋಲ್ಕತ್ತಾ ನೈಟ್‌ರೈಡರ್ಸ್ ತಂಡದಲ್ಲಿ ಅಂತಹದ್ದೇ ಒಂದು ಪ್ರತಿಭೆ ಮಿಂಚುತ್ತಿದೆ. ಆ ಪ್ರತಿಭೆ ಹೆಸರು ರಿಂಕು ಸಿಂಗ್. ಈ ರಿಂಕು ಸಿಂಗ್ ತೀರಾ ಬಡ ಕುಟುಂಬದಿಂದಲೇ ಬಂದ ಪ್ರತಿಭಾವಂತ ಯುವಕ. ಈ ಆಟಗಾರನಿಗೆ ಐಪಿಎಲ್ ಒಂದು ಅದ್ಭುತ ಅವಕಾಶವೇ ಆಗಿ ಬಿಟ್ಟಿದೆ.
ರಿಂಕು ಸಿಂಗ್ ಉತ್ತರ ಪ್ರದೇಶದ ಆಲಿಘರ್ ಮೂಲದ ಯುವಕ. ಕೇವಲ 24 ವರ್ಷ ಈ ರಿಂಕು ಸಿಂಗ್ ಗೆ. ತಂದೆ ಸಿಲಿಂಡರ್ ಡೆಲಿವರಿ ಕೆಲಸ ಮಾಡ್ತಾರೆ. ಅಣ್ಣ ಆಟೋ ಓಡಿಸ್ತಾರೆ. 9ನೇ ತರಗತಿಗೇನೆ ಶಾಲೆ ಬಿಟ್ಟಿರೋ ರಿಂಕು ಜೀವನಕ್ಕಾಗಿ ಆಟೋ ಕೂಡ ಓಡಿಸಿದ್ದಾರೆ. ಆದರೆ, ಈಗ ನೈಟ್‌ರೈಡರ್ಸ್ ತಂಡದ ಬೇಡಿಕೆ ಆಟಗಾರ. ತಂಡದ ಗೆಲುವಿಗೂ ಕಾರಣ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿ ಹೊರ ಹೊಮ್ಮಿದ್ದಾರೆ.
PublicNext
04/05/2022 11:49 am